ಬಳ್ಳಾರಿ : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ರೋಮೇನಿಯಾ ದೇಶದಲ್ಲಿ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಸ್.ಬಸವರಾಜಪ್ಪ ಅವರು ತಿಳಿಸಿದ್ದಾರೆ.

Viral photo: ಮಹಾ ಸರ್ಕಾರಕ್ಕೆ ಬಿಗ್ ಶಾಕ್, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆ ವಿಲೀನ ನಕ್ಷೆ ಹಂಚಿಕೊಂಡ ಮಹಾ ಕನ್ನಡಿಗರು, ಪೋಟೋ ವೈರಲ್

ಆಸಕ್ತ ಅಭ್ಯರ್ಥಿಗಳು https://kvtsdc.com ನಲ್ಲಿ ನೊಂದಾಯಿಸಿಕೊಳ್ಳಬಹುದು. ಅರ್ಹತೆಗಳು: ವಯಸ್ಸು 18ರಿಂದ 50 ವರ್ಷದವಾಗಿರಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ವೃತ್ತಿಯಲ್ಲಿ 6ತಿಂಗಳು ಹಾಗೂ ಹೆಚ್ಚಿಗೆ ಅನುಭವ ಹೊಂದಿರಬೇಕು. ವೇತನ 48,380 ರೂ.(ಪ್ರತಿ ತಿಂಗಳಿಗೆ) ಇರುತ್ತದೆ. 2ವರ್ಷದ ಅವಧಿಯವರೆಗೆ ಒಪ್ಪಂದ ಇರುತ್ತದೆ. ವಿಸಾ, ವಿಸಾ ಸ್ಟಾಂಪಿಂಗ್, ವಿಮಾನ ಟಿಕೇಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ ಕ್ಲಿಯರನ್ಸ್ ಹಾಗೂ 3 ತಿಂಗಳು ಊಟ ಮತ್ತು ವಸತಿ ಹಾಗೂ ಆರೋಗ್ಯ ರಕ್ಷಣೆ, ವಿಮೆ ಸಂಪೂರ್ಣ ಉಚಿತವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಎಸ್‍ಪಿ ಸರ್ಕಲ್ ಹತ್ತಿರದ ಪಾರ್ವತಿ ನಗರದ ಬಸವಭವನ ರಸ್ತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಎದುರಿನ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8073852104, 9964502514 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

BIGG NEWS: ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ವಿವಾದ; ಆಡಿಯೋದಲ್ಲಿ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ: ವಿದ್ಯಾಭರಣ್ ತಾಯಿ

Share.
Exit mobile version