ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಭಾರತೀಯ ಅಂಚೆ ಇಲಾಖೆ(India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 29 ಸ್ಟಾಫ್ ಕಾರು ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಟ್ ಮತ್ತು ಹೆವಿ ಮೋಟಾರ್ ವೆಹಿಕಲ್ನಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-27 ವರ್ಷದೊಳಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 19,900-63,200 ವೇತನ ನೀಡಲಾಗುತ್ತದೆ. ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.
ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಮಾರ್ಚ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಟಿ ನೀಡಬಹುದು.
Breaking News: ಭೌತಿಕ ರ್ಯಾಲಿಗಳ ನಿಷೇಧದ ಬಗ್ಗೆ ನಾಳೆ ಚುನಾವಣಾ ಆಯೋಗ ಮಹತ್ವದ ಸಭೆ : Assembly poll 2022
Breaking News: ಭೌತಿಕ ರ್ಯಾಲಿಗಳ ನಿಷೇಧದ ಬಗ್ಗೆ ನಾಳೆ ಚುನಾವಣಾ ಆಯೋಗ ಮಹತ್ವದ ಸಭೆ : Assembly poll 2022