ನವದೆಹಲಿ : ಹಸಿರು ಇಂಧನ ಕಂಪನಿ ಗೋಲ್ಡಿ ಸೋಲಾರ್ ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಸೌರ ಉತ್ಪಾದನೆ ಮತ್ತು ಮಾರಾಟದ ನಂತರದ ಸೇವೆಗಳ ಕ್ಷೇತ್ರದಲ್ಲಿ 5,000 ಜನರನ್ನ ನೇಮಿಸಿಕೊಳ್ಳಲು ಯೋಜಿಸಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (MD) ಈಶ್ವರ್ ಧೋಲಾಕಿಯಾ ಈ ಮಾಹಿತಿಯನ್ನ ನೀಡಿದ್ದಾರೆ.
ಗುಜರಾತ್ ಮೂಲದ ಕಂಪನಿಯು ತನ್ನ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನ 6 ಗಿಗಾವ್ಯಾಟ್’ಗೆ ಹೆಚ್ಚಿಸಲು 5,000 ಕೋಟಿ ರೂ.ಗಳನ್ನ ಹೂಡಿಕೆ ಮಾಡುವ ಪ್ರಕ್ರಿಯೆಯಲ್ಲಿದೆ. “ಗೋಲ್ಡಿ ಸೋಲಾರ್ ತಳಮಟ್ಟದಲ್ಲಿ ಉದ್ಯೋಗಗಳನ್ನ ಸೃಷ್ಟಿಸಲು ಯೋಜಿಸಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು 2024-25ರ ಆರ್ಥಿಕ ವರ್ಷದ ವೇಳೆಗೆ ವಿವಿಧ ವಿಭಾಗಗಳಲ್ಲಿ 5,000ಕ್ಕೂ ಹೆಚ್ಚು ಜನರನ್ನು ನೇಮಕ ಮಾಡುವ ಕಂಪನಿಯ ಗುರಿಯನ್ನ ಸಾಧಿಸಲು ಸಹಾಯ ಮಾಡುತ್ತದೆ” ಎಂದರು.
ತಮ್ಮ ಕಂಪನಿಯು ಮೂಲಸೌಕರ್ಯ ಸಂಸ್ಥೆ ಲಾರ್ಸೆನ್ ಅಂಡ್ ಟೂಬ್ರೊ (L&T) ದತ್ತಿ ವಿಭಾಗದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಧೋಲಾಕಿಯಾ ಹೇಳಿದರು. ಈ ಪಾಲುದಾರಿಕೆಯ ಅಡಿಯಲ್ಲಿ, ಸೌರ ಉತ್ಪಾದನಾ ವಲಯಕ್ಕೆ ನುರಿತ ಕಾರ್ಯಪಡೆಯನ್ನ ರಚಿಸಲಾಗುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ – ಸಿಎಂ ಬೊಮ್ಮಾಯಿ