ಬೆಂಗಳೂರು: ಇದುವರೆಗೆ ಬ್ಯಾಂಕ್ ಅಧಿಕಾರಿಗಳು, ಹಾಗೇ ಹೀಗೆ ಎಂಬುದಾಗಿ ವಿವಿಧ ಮಾರ್ಗಗಳಲ್ಲಿ ವಂಚನೆ ಮಾಡುತ್ತಿದ್ದಂತ ಆನ್ ಲೈನ್ ವಂಚಕರು, ಈಗ ಜನಪ್ರಿಯ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ( chandrashekhar kambar ) ಅವರ ಹೆಸರಿನಲ್ಲಿ ಸಂದೇಶ ಕಳುಹಿಸಿರುವಂತ ವಂಚಕರು, ಧನ ಸಹಾಯ ಮಾಡುವಂತೆ ಕೋರಿ ವಂಚನೆಗೆ ಇಳಿದಿದ್ದಾರೆ. ಈ ಹಿನ್ನಲೆಯಲ್ಲಿ ವಂಚಕರ ವಿರುದ್ಧ ಸೈಬರ್ ಕ್ರೈ ಪೊಲೀಸರಿಗೆ ( Cyber Crime Police ) ದೂರು ನೀಡಲಾಗಿದೆ.
ಹೌದು.. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಹೆಸರಿನಲ್ಲಿ ಹಲವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿರುವಂತ ಆನ್ ಲೈನ್ ವಂಚಕರು, ಹಲವರಿಗೆ ಧನ ಸಹಾಯ ಮಾಡುವಂತೆ ಮನವಿಯ ಸಂದೇಶ ಕಳುಹಿಸಿದ್ದಾರೆ.
ಈ ಕುರಿತಂತೆ ಚಂದ್ರಶೇಖರ ಕಂಬಾ ಅವರು ಬೆಂಗಳೂರಿನ ದಕ್ಷಿಣ ವಿಭಾಗದ ಸಿಇಎಸ್ ಠಾಣೆಗೆ ದೂರು ನೀಡಿದ್ದಾರೆ. ಆ ದೂರಿನಲ್ಲಿ ನನ್ನ ಹೆಸರು ಮತ್ತು ಪೋಟೋ ಬಳಸಿ ನನಗೆ ಧನ ಸಹಾಯ ಮಾಡಿ ಎಂದು ವಿವಿಧ ಕಡೆ 7341155435 ಸಂಖ್ಯೆಯಿಂದ ವಾಟ್ಸಾಪ್ ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಾರ್ವಜನಿಕರ ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಇನ್ನೂ ಈ ರೀತಿ ನನ್ನ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು. ಹೀಗೆ ವಾಟ್ಸಾಪ್ ಮೂಲಕ ಧನ ಸಹಾಯ ಮಾಡಿ ಎಂಬುದಾಗಿ ಬೇಡಿಕೆ ಇಡುತ್ತಿರುವಂತವರನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂಬುದಾಗಿ ದೂರಿನಲ್ಲಿ ಮನವಿ ಮಾಡಿದ್ದಾರೆ.