ಸುಭಾಷಿತ :

Tuesday, February 18 , 2020 1:50 PM

ಹೊಸ ವರ್ಷಕ್ಕೆ ‘ಜಿಯೋ ಗ್ರಾಹಕ’ರಿಗೆ ಬಂಫರ್ ಆಫರ್ : 2020 ರಿಚಾರ್ಜ್ ಮಾಡಿದ್ರೇ ವರ್ಷದವರೆಗೆ ‘ಅನಿಯಮಿತ’ ಸೇವೆ


Tuesday, December 24th, 2019 12:30 pm

ರಿಲಯನ್ಸ್ ಜಿಯೋ “2020 ಹ್ಯಾಪಿ ನ್ಯೂ ಇಯರ್ ಆಫರ್” ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಹೊಸ ಯೋಜನೆಯಡಿ ರಿಲಯನ್ಸ್ ಜಿಯೋ ಗ್ರಾಹಕರು 2,020 ರೂಗಳನ್ನು ಪಾವತಿಸಿ ಒಂದು ವರ್ಷದವರೆಗೆ ‘ಅನಿಯಮಿತ’ ಸೇವೆಗಳನ್ನು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋ ನೀಡಿರುವ ಹೊಸ ಯೋಜನೆ ಡಿಸೆಂಬರ್ 24, 2019 ರಿಂದ ಲಭ್ಯವಿರುತ್ತದೆ.

ರಿಲಯನ್ಸ್ ಜಿಯೋ ಪ್ರಾರಂಭಿಸಲಿರುವ ‘2020 ಹ್ಯಾಪಿ ನ್ಯೂ ಇಯರ್ ಆಫರ್’ ಸ್ಮಾರ್ಟ್‌ಫೋನ್ ಮತ್ತು ಜಿಯೋಫೋನ್ ಗ್ರಾಹಕರಿಗೆ ಲಭ್ಯವಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ರಿಲಯನ್ಸ್ ಜಿಯೋ ಅನಿಯಮಿತ ಕರೆ, 1.5 ಜಿಬಿ ದೈನಂದಿನ ಡೇಟಾ, ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ. ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ನೂತನ ಗ್ರಾಹಕರು 2,020 ರೂ ಪಾವತಿಸಿ ಹೊಸ ಜಿಯೋಫೋನ್ ಪಡೆಯಬಹುದಾಗಿದ್ದು, ಇದರೊಂದಿಗೆ 12 ತಿಂಗಳ ಸೇವೆಯನ್ನು ಪಡೆಯಬಹುದು ಎಂದು ರಿಲಯನ್ಸ್ ಜಿಯೋ ಹೇಳಿದೆ. ಯೋಜನೆಯಡಿಯಲ್ಲಿ ಜಿಯೋ ಪೋನ್ ಬಳಕೆದಾರರಿಗೆ ಅನಿಯಮಿತ ಕರೆ ಮಾಡುವ ಅವಕಾಶ, ದಿನಕ್ಕೆ 0.5 ಜಿಬಿ ಡೇಟಾ, ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ. ಜಿಯೋಫೋನ್ ಬಳಕೆದಾರರಿಗೆ ಯೋಜನೆಯು 12 ತಿಂಗಳು ವ್ಯಾಲಿಡಿಟಿಯನ್ನು ಹೊಂದಿರಲಿದೆ.

ನೂತನ “ಹ್ಯಾಪಿ ನ್ಯೂ ಇಯರ್ ಆಫರ್” ಅಡಿಯಲ್ಲಿ ಜಿಯೋ ಅಲ್ಲದೆ ಬೇರೆ ಕಂಪನಿಗಳಿಗೆ ಮಾಡುವ ಕರೆಗಳಿಗೆ ಎಫ್‌ಯುಪಿ ಅನ್ವಯಿಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions