ಸುಭಾಷಿತ :

Wednesday, January 22 , 2020 12:11 PM

ಸ್ಮಾರ್ಟ್ಫೋನ್ ಬಳಕೆದಾರರಿಗಾಗಿ ‘ಜಿಯೋ ಬ್ರೌಸರ್’.! ವೈಶಿಷ್ಟ್ಯತೆಗಳೇನು ಗೊತ್ತಾ.?


Monday, May 6th, 2019 1:27 pm

ನ್ಯೂಸ್ ನೌ ಸ್ಪೆಷಲ್ ಡೆಸ್ಕ್ : ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ಬೆಲೆಯ ಡೇಟಾ ಸೇವೆಯ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಹೊಸ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದೆ. ಈ ನೂತನ ಅಪ್ಲಿಕೇಶನ್ ತನ್ನ ವಿಭಿನ್ನ ವೈಶಿಷ್ಟ್ಯತೆಗಳ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರನ್ನು ಸೆಳೆಯುತ್ತಿದೆ. ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದ್ದು, ಲಕ್ಷಾಂತರ ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಅನೇಕ ಬ್ರೌಸರ್‌ಗಳಿದ್ದರೂ, ಅವೆಲ್ಲಕ್ಕಿಂತ ಜಿಯೋ ಬ್ರೌಸರ್ ಹೇಗೆ ಭಿನ್ನ ಮತ್ತು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ವಿವರ ಮುಂದೆ ಓದಿ..

ಈ ಜಿಯೋ ಬ್ರೌಸರ್ ಬಳಸಲು ನೀವು ಜಿಯೋ ಸಿಮ್ ಅನ್ನು ಹೊಂದಿರಬೇಕಿಲ್ಲ. ಇದೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು, ಯಾರೂ ಬೇಕಾದರೂ ಪ್ಲೇ ಸ್ಟೋರ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇನ್ನು ಈ ಜಿಯೋ ಬ್ರೌಸರ್ ಅನ್ನು ನಿಮ್ಮ ಸ್ಥಳೀಯ ಭಾಷೆಯಲ್ಲೇ ಬಳಸಬಹುದು. ಇಂಗ್ಲೀಷ್ ಸೇರಿದಂತೆ ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಮತ್ತು ಕನ್ನಡ ಭಾಷೆಯಲ್ಲಿಯೂ ಈ ಬ್ರೌಸರ್‌ನ್ನು ಉಪಯೋಗಿಸಬಹುದು.

ನಿಮಗೆ ಬೇಕಾದ ಭಾಷೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಭಾರತೀಯರನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಯೋ ಬ್ರೌಸರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಜಿಯೋ ಬ್ರೌಸರ್‌ನಲ್ಲಿ ಬಳಕೆದಾರರಿಗೆ ಮನರಂಜನೆ, ಕ್ರೀಡೆ, ಸುದ್ದಿ, ತಂತ್ರಜ್ಞಾನ ಮತ್ತು ವೀಡಿಯೊಗಳನ್ನು ವೀಕ್ಷಿಸಲು ನೇರವಾದ ಆಯ್ಕೆಗಳನ್ನು ಕೂಡ ನೀಡಲಾಗಿದೆ.

ಇನ್ನು ತಾಂತ್ರಿಕವಾಗಿಯೂ ಇದು ಮೊಬೈಲ್ ಬಳಕೆದಾರರಿಗೆ ಅತ್ಯಂತ ಸೂಕ್ತವಾಗಿದೆ ಏಕೆಂದರೆ, ಇದರ ಸ್ಟೋರೇಜ್ ಪ್ರಮಾಣ ಕೇವಲ 4.8MB ಆಗಿದೆ. ಹೀಗಾಗಿ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಜಿಯೋ ಬ್ರೌಸರ್‌ನಲ್ಲಿ ಸ್ಥಳೀಯ ಸುದ್ದಿಗಳ ವಿಭಾಗವನ್ನು ಕೂಡ ಬಳಕೆದಾರರಿಗೆ ನೀಡಲಾಗಿದೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಊರಿನ ಸುದ್ದಿ ಸಮಾಚಾರವನ್ನು ತಿಳಿದುಕೊಳ್ಳಬಹುದು.

ಇನ್ನು ‘ಪ್ರೈವೆಸಿ ಮೋಡ್’ ಕೂಡ ಈ ಜಿಯೋ ಬ್ರೌಸರ್‌ನಲ್ಲಿದೆ. ಇದರೊಂದಿಗೆ ಬ್ರೌಸರ್‌ನಲ್ಲಿ ಪೇಜ್‌ಗಳನ್ನು ಬುಕ್‌ಮಾರ್ಕ್ ಮಾಡಲು ಮತ್ತು ಆ ಲಿಂಕ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಆಯ್ಕೆ ಇದೆ.
ಜಿಯೋ ಬ್ರೌಸರ್ ವಾಯ್ಸ್ ಇನ್‌ಪುಟ್ ಅನ್ನು ಹೊಂದಿದ್ದು, ಧ್ವನಿಯ ಮೂಲಕ ನೀವು ಸರ್ಚ್ ಮಾಡಿಕೊಳ್ಳಬಹುದು. ಹಾಗೆಯೇ ಟೆಕ್ಸ್ಟ್ ಗಾತ್ರವನ್ನು ನಿಮಗೆ ಬೇಕಾದ ಹಾಗೆ ಬದಲಿಸಿಕೊಳ್ಳಬಹುದು.

ಹೀಗೆ ಹಲವಾರು ಆಧುನಿಕ ವೈಶಿಷ್ಟ್ಯತೆಗಳ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರ ಗಮನ ಸೆಳೆದಿರುವ ಜಿಯೋ ಬ್ರೌಸರ್ ಸದ್ಯ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಸ್ಮಾರ್ಟ್ಫೋನ್ ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಅನುಭವ ಪಡೆದುಕೊಳ್ಳಬಹುದು. ಬ್ರೊಸರ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ..

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
State
Health
Automobiles
Astrology
Cricket Score
Poll Questions