ನವದೆಹಲಿ : ಗ್ರಾಹಕರಿಗೆ ಜಿಯೋ ಮತ್ತು ಏರ್‌ ಟೆಲ್‌ ಬಿಗ್‌ ಶಾಕ್‌ ನೀಡಿದ್ದು, ಇಂದಿನಿಂದ ರಿಚಾರ್ಜ್‌ ದರ ಹೆಚ್ಚಳವಾಗಲಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ರಿಚಾರ್ಜ್‌ ದರವೂ ಕೈಸುಡಲಿದೆ.

ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳಲ್ಲಿ 12% ರಿಂದ 25% ವರೆಗೆ ಸುಂಕ ಹೆಚ್ಚಳವನ್ನ ಘೋಷಿಸಿದೆ . ಹೊಸ ಯೋಜನೆಗಳು ಜುಲೈ 3 ರ ಇಂದಿನಿಂದ ಜಾರಿಗೆ ಬರಲಿವೆ. ಅದ್ರಂತೆ, ಅತ್ಯಂತ ಸಕ್ರಿಯ ಯೋಜನೆ 28 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ಹೊಂದಿದೆ.

ಒಟ್ಟಾರೆಯಾಗಿ ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್ ದರ ಶೇ.20ರಷ್ಟು ಹೆಚ್ಚಳವಾಗಲಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತೆ ಆಗಿದೆ.

ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು

ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಒದಗಿಸುತ್ತಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ ಬಿಲ್ಲಿಂಗ್ ಚಕ್ರಕ್ಕೆ 349 ರೂ. 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ.

ಜಿಯೋ ಎರಡು ಹೊಸ ಅಪ್ಲಿಕೇಶನ್ಗಳನ್ನು ಸಹ ಪ್ರಾರಂಭಿಸುತ್ತಿದೆ:

ಜಿಯೋಸೇಫ್: ಕರೆ, ಮೆಸೇಜಿಂಗ್ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸೆಕ್ಯೂರ್ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 199 ರೂ.
ಜಿಯೋ ಟ್ರಾನ್ಸ್ಲೇಟ್: ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ ಚಾಲಿತ ಬಹುಭಾಷಾ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 99 ರೂ.

ಜಿಯೋ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.

ಡೇಟಾ ಆಡ್-ಆನ್ ಯೋಜನೆಗಳು

ಪ್ರಸ್ತುತ ಬೆಲೆ (ರೂ.) 15 ರೂ.ಗೆ ನೀಡಲಾಗುತ್ತಿದ್ದಂತ 1 ಜಿಪಿ ಡೇಟಾ ದರವನ್ನು ರೂ.19ಕ್ಕೆ ಏರಿಕೆಯ ಮಾಡಲಾಗುತ್ತಿದೆ. 25 ರೂ.ಗೆ ನೀಡಲಾಗುತ್ತಿದ್ದಂತ 2 ಜಿಪಿ ಡೇಟಾ ದರವನ್ನೂ ರೂ.29ಕ್ಕೆ ಏರಿಕೆ ಮಾಡಲಾಗುತ್ತಿದೆ. ಇನ್ನೂ ರೂ.61ಕ್ಕೆ ನೀಡಲಾಗುತ್ತಿದ್ದಂತ 6 ಜಿಬಿ ಡೇಟಾ ದರವನ್ನು ರೂ.69ಕ್ಕೆ ಹೆಚ್ಚಳ ಮಾಡಲಾಗುತ್ತಿದೆ.

ಹೀಗಿದೆ ಹೊಸ ಹೆಚ್ಚಳದ ಪ್ಲಾನ್ ದರಗಳ ಪಟ್ಟಿ

ರೂ.155ಗಳಿಗೆ ನೀಡಲಾಗುತ್ತಿದ್ದಂತ 28 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಪ್ಲಾನ್ ಅನ್ನು ರೂ.189ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ರೂ.209ರಿಂದ 249ಕ್ಕೆ 28 ದಿನಗಳ ಪ್ಲಾನ್ ದರ ಏರಿಕೆ ಮಾಡಿದ್ರೇ, ರೂ.239ರಿಂದ 299ಕ್ಕೆ ಏರಿಕೆ ಮಾಡಲಾಗುತ್ತಿದೆ.

ರೂ.395ರ ಪ್ಲಾನ್ ಅನ್ನು ರೂ.449ಕ್ಕೆ ಏರಿಕೆ ಮಾಡಿ, 3 ಜಿಬಿ ಪ್ರತಿ ದಿನ ಡೇಟಾ, 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ. ರೂ.533ರ ದರವನ್ನು 629ಕ್ಕೆ ಹೆಚ್ಚಳ ಮಾಡಿ, 56 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 666ರೂ ದರವನ್ನು 799ಕ್ಕೆ ಹೆಚ್ಚಿಸಿ, ಪ್ರತಿ ದಿನ 1.5 ಜಿಪಿ ಡೇಟಾದಂತೆ 84 ದಿನಗಳ ವ್ಯಾಲಿಟಿಡಿ ನೀಡಲಾಗಿದೆ.

ಏರ್‌ ಟೆಲ್‌ ರಿಚಾರ್ಜ್‌ ಪ್ಲ್ಯಾನ್‌

ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:
ರೂ. 179ರಿಂದ ರೂ. 199ಕ್ಕೆ ಹೆಚ್ಚಳ (28 ದಿನ ವ್ಯಾಲಿಡಿಟಿ)
ರೂ. 455ರಿಂದ ರೂ. 509ಕ್ಕೆ ಹೆಚ್ಚಳ (84 ದಿನ ವ್ಯಾಲಿಡಿಟಿ)
ರೂ.1,799ರಿಂದ ರೂ.1,999ಕ್ಕೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಡಾಟಾ ಪ್ಲಾನ್ ಗಳು
1 ಜಿಬಿ-ರೂ. 265 ರಿಂದ ರೂ. 299ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
1.5 ಜಿಬಿ-ರೂ. 299 ರಿಂದ ರೂ. 349ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
2.5 ಜಿಬಿ-ರೂ. 359 ರಿಂದ ರೂ. 409ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
3 ಜಿಬಿ-ರೂ. 399 ರಿಂದ ರೂ. 449ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
1.5ಜಿಬಿ-ರೂ. 479 ನಿಂದ ರೂ. 579ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
2 ಜಿಬಿ-ರೂ. 549 ನಿಂದ ರೂ. 649ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
1.5ಜಿಬಿ-ರೂ. 719 ನಿಂದ ರೂ. 859ಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
2 ಜಿಬಿ-ರೂ. 839 ನಿಂದ ರೂ. 979ಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)
2 ಜಿಬಿ-ರೂ. 2,999 ನಿಂದ ರೂ. 3,599ಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

Share.
Exit mobile version