ನವದೆಹಲಿ: ಜೆಇಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಷ್ಯಾ ಪ್ರಜೆಯನ್ನು ಸಿಬಿಐ ಬಂಧಿಸಿದೆ. ಜೆಇಇ ಮೇನ್ಸ್ 2021 ರ ಸಾಫ್ಟ್ವೇರ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಬಿಐ ಹೊರಡಿಸಿದ ಎಲ್ಒಸಿ ಆಧಾರದ ಮೇಲೆ ಕಜಕಿಸ್ತಾನದಿಂದ ಆಗಮಿಸಿದ ರಷ್ಯಾದ ಪ್ರಜೆಯನ್ನು ದೆಹಲಿಯ ಐಜಿಐ ವಿಮಾನ ನಿಲ್ದಾಣದ ಬ್ಯೂರೋ ಆಫ್ ಇಮಿಗ್ರೇಷನ್ನಿಂದ ವಶಕ್ಕೆ ಪಡೆದ ನಂತರ ಸಿಬಿಐ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಅವರು ಪ್ರಮುಖ ಹ್ಯಾಕರ್ ಆಗಿದ್ದ ಎನ್ನಲಾಗಿದೆ.
ಜೆಇಇ ಪರೀಕ್ಷೆ ರಿಗ್ಗಿಂಗ್ ಪ್ರಕರಣದಲ್ಲಿ ಪಾತ್ರ ವಹಿಸಿದ್ದ ರಷ್ಯಾದ ಮೈಕೆಲ್ ಶಾರ್ಜೀಲ್ ಎಂಬಾತನನ್ನು ಸಿಬಿಐ ಸೋಮವಾರ ಬಂಧಿಸಿದೆ ಎನ್ನಲಾಗಿದೆ.
.