ಬಿಹಾರ: ಎನ್ ಡಿಎ ಜೊತೆಗಿನ ಮೈತ್ರಿಯಿಂದ ಹೊರ ಬಂದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ( Nitish Kumar ) ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ, ಜೆಡಿಯು ಜೊತೆ ಸೇರಿ ಸರ್ಕಾರ ರಚಿಸೋದಕ್ಕೆ ರಾಜ್ಯಪಾಲರಿಗೆ ಹಕ್ಕು ಮಂಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ನಿತೀಶ್ ಕುಮಾರ್ ಅವರು, ನಾವು 164 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಮತ್ತು ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇವೆ, ಅವರು ಯಾವಾಗ ಪ್ರಮಾಣವಚನ ಸ್ವೀಕರಿಸಬಹುದು ಎಂದು ನಮಗೆ ತಿಳಿಸುತ್ತಾರೆ ಎಂದು ಹೇಳಿದ್ದಾರೆ.

ಈಗ ರೂಪುಗೊಂಡಿರುವ ರಾಜ್ಯ ಚುನಾವಣೆಯ ಸಮಯದಲ್ಲಿ ಜನರು ಅದೇ ಮೈತ್ರಿಕೂಟಕ್ಕೆ ಮತ ಚಲಾಯಿಸಿದರು. ಹಿಂದಿನ ಸರ್ಕಾರ (ಬಿಜೆಪಿ-ಜೆಡಿಯು ಸರ್ಕಾರ) ಜನರ ಆದೇಶದಂತೆ ಇರಲಿಲ್ಲ, ಈಗ ರಾಜ್ಯ ಸರ್ಕಾರವು ಜನರ ಜನಾದೇಶಕ್ಕೆ ಅನುಗುಣವಾಗಿರುತ್ತದೆ ಎಂದು ಆರ್ಜೆಡಿ ಸಂಸದ ಶರದ್ ಯಾದವ್ ಹೇಳಿದ್ದಾರೆ.

Share.
Exit mobile version