ಸುಭಾಷಿತ :

Tuesday, February 18 , 2020 1:51 PM

ಬ್ರೇಕಿಂಗ್ : ‘ಜೆಡಿಎಸ್’ಗೆ ಮಾಜಿ ಎಂಎಲ್ಸಿ ‘ರಮೇಶ್ ಬಾಬ್’ ಗುಡ್ ಬೈ.?


Saturday, January 25th, 2020 2:56 pm

ಬೆಂಗಳೂರು : ಕಳೆದ ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದಂತ ಜೆಡಿಎಸ್ ಸಮಾವೇಶದಲ್ಲಿ ಎಂಎಲ್ಸಿ ಚೌಡ ರೆಡ್ಡಿ ಅವರಿಗೆ ಆಗ್ನೇಯ ಪದವೀಧ ಕ್ಷೇತ್ರದ ಚುನಾವಣೆಗೆ ಟಿಕೆಟ್ ನೀಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಹೀಗಾಗಿ ಒಂದು ವೇಳೆ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದೇ ಆದಲ್ಲಿ, ಜೆಡಿಎಸ್ ವಕ್ತಾರ, ಮಾಜಿ ಎಂ ಎಲ್ ಸಿ ರಮೇಶ್ ಬಾಬು ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಜೆಡಿಎಸ್ ವಕ್ತಾರ ಹಾಗೂ ಮಾಜಿ ಎಂಎಲ್ಸಿ ರಮೇಶ್ ಬಾಬು, ಜೂನ್ ತಿಂಗಳಲ್ಲಿ ನೆಡೆಯುವ ಆಗ್ನೇಯ ಪಧವೀದರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಒಬ್ಬ ಆಕಾಂಕ್ಷಿಯಾಗಿದ್ದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತೇನೆ. JDS ನಲ್ಲಿ ನನಗೇ ಅವಕಾಶ ಸಿಗುವ ನಂಬಿಕೆ ಇದೆ. ಈಗಲೂ ಪಕ್ಷದಲ್ಲಿ ಸಕ್ರಿಯವಾಗಿದ್ದು ಶ್ರೀ ದೇವೇಗೌಡರು ವಹಿಸಿರುವ ಜವಾಬ್ದಾರಿಗೆ ಅನುಗುಣವಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ಕೆಲವು ಮಾಧ್ಯಮಗಳಲ್ಲಿ ನಾನು ಬೇರೆ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ವರದಿಯಾಗಿದೆ. ಪ್ರಸ್ತುತ ನಾನು JDS ಪಕ್ಷದಲ್ಲಿದ್ದು ಬೇರೆ ಪಕ್ಷ ಸೇರುವ ಪ್ರಶ್ನೆ ಇರುವುದಿಲ್ಲ. ಕೆಲವು ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಅಪೂರ್ಣವಾಗಿದ್ದು, JDS ನಲ್ಲಿ ಅವಕಾಶ ನೀಡದೇ ಹೋದರೆ ನಂತರ ಈ ಕ್ಷೇತ್ರದ ಮತದಾರರು ಮತ್ತು ಶಿಕ್ಷಕರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು. ಈ ತೀರ್ಮಾನವನ್ನೂ ಕೆಲವೇ ದಿನಗಳಲ್ಲಿ ತೆಗೆದುಕೊಳ್ಳಲಿದ್ದೇನೆ ಎಂದಿದ್ದಾರೆ.

ಪಕ್ಷದಲ್ಲಿ 40 ವರ್ಷಗಳಿಂದ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದು, ನಮ್ಮ ನಾಯಕರು ನನಗೆ ಅನ್ಯಾಯ ಮಾಡುವುದಿಲ್ಲ ಎಂಬುವ ನಂಬಿಕೆ ಇದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಜೆಡಿಎಸ್ ವರಿಷ್ಠರಾದಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮಗೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ 15-20 ದಿನ ಕಾದು ನೋಡುವೆ. ಆನಂತ್ರ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ರಮೇಶ್ ಬಾಬು ಸ್ಪಷ್ಟ ಪಡಿಸಿದ್ದಾರೆ.

ಒಟ್ಟಾರೆಯಾಗಿ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಜೆಡಿಎಸ್ ವಕ್ತಾರ, ಮಾಜಿ ಎಂ ಎಲ್ ಸಿ ರಮೇಶ್ ಬಾಬು ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದ್ರೇ ಕುಮಾರಸ್ವಾಮಿಯವರು ಚೌಡ ರೆಡ್ಡಿಗೆ ನೀಡುವುದಾಗಿ ಜೆಡಿಎಸ್ ಸಮಾವೇಶದಲ್ಲಿ ಘೋಷಿಸಿದ್ದರಿಂದ ಇದೀಗ ಬೇಸರದಲ್ಲಿದ್ದಾರೆ. ಒಂದು ವೇಳೆ ಜೆಡಿಎಸ್ ನಿಂತ ಟಿಕೆಟ್ ಕೈ ತಪ್ಪಿದ್ದೇ ಆದಲ್ಲಿ… ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions