ಸುಭಾಷಿತ :

Saturday, February 29 , 2020 6:29 PM

ಸಿಲಿಕಾನ್ ಸಿಟಿ ‘ವಾಹನ ಸವಾರ’ರ ಗಮನಕ್ಕೆ : ಜ.20ರಿಂದ ‘ಜಯದೇವ ಮೇಲ್ಸೇತುವೆ’ ಸಂಚಾರ ಬಂದ್


Saturday, January 18th, 2020 11:03 am

ಬೆಂಗಳೂರು : ನಮ್ಮ ಮೆಟ್ರೋ ಎರಡನೇ ಹಂತದ ರೀಚ್ 5ನಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತ ಕಾಮಾಗಾರಿಯ ಚಲನಗೆಗಾಗಿ ಜಯದೇವ ಮೇಲ್ಸೇತುವೆ ಸಂಚಾರವನ್ನು ಜನವರಿ 20, 2020ರಿಂದ ವಾಹನ ಸಂಚಾರಕ್ಕೆ ಬಂದ್ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರು ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಎಂಆರ್ ಸಿ ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ ಮೆಟ್ರೋ 5ನೇ ಹಂತದ ಕಾಮಗಾರಿ, ಬನ್ನೇರುಘಟ್ಟ ರಸ್ತೆಯಿಂದ ಎಂ ಜಿ ರಸ್ತೆಯವರೆಗಿನ ಕಾಮಗಾರಿಗೆ ಜಯದೇವ ಮೇಲ್ಸೇತುವೆ ಅಡ್ಡಿಯಾಗಿತ್ತು. ಇದುವರೆಗೆ ವಿವಿಧ ಕಾರ್ಯಗಳಲ್ಲಿ ನಿರತವಾಗಿದ್ದ ಬಿ ಎಂ ಆರ್ ಸಿ ಎಲ್, ಇದೀಗ ಅನಿವಾರ್ಯವಾಗಿ ಕಾಮಗಾರಿಗಾಗಿ ಜಯದೇವ ಮೇಲ್ಸೇತುವೆ ಹೊಡೆಯಬೇಕಿದೆ. ಹೀಗಾಗಿ ಜಯದೇವ ಮೇಲ್ಸೇತುವೆ ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ.

ಅಂದಹಾಗೇ ಕಳೆದ ಹನ್ನೆರಡು ವರ್ಷಗಳ ಹಿಂದೆಯಷ್ಟೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿಗ್ನಲ್ ಮುಕ್ತ ಸಂಚಾರದ ಸಲುವಾಗಿ ಜಯದೇವ ಮೇಲ್ಸೇತುವೆನ್ನು 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇಂತಹ ಮೇಲ್ಸೇತುವೆಯನ್ನು ಮೆಟ್ರೋ ಕಾಮಗಾರಿಗೆ ಅಡ್ಡಿ ಹಿನ್ನಲೆಯಲ್ಲಿ ಇದೀಗ ಹೊಡೆದು ಹಾಕಲಾಗುತ್ತಿದೆ. ಹೀಗಾಗಿ ಜಯದೇವ ಮೇಲ್ಸೇತುವೆ ಸಂಚಾರ ಬಂದ್ ಆಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿ ಸಾಗುವಂತೆ ಬಿ ಎಂ ಆರ್ ಸಿ ಎಲ್ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions