ಶಿವಮೊಗ್ಗ: ಮೊಗವೀರ ಸಮುದಾಯದ ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿ ವರ್ಷ 25,000 ಸಹಾಯ ಧನ ನೀಡಲಾಗುವುದು ಅಂತ ದಕ್ಷಿಣ ಕನ್ನಡ ಜಿಲ್ಲೆಯ ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಹೇಳಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮೊಗವೀರ ಸಮುದಾಯದ ವಿದ್ಯಾರ್ಥಿಗಳ ಸಾಧನೆ ಕಂಡು ಸಂತಸವಾಗಿದೆ. ಇದೇ ಸಂದರ್ಭದಲ್ಲಿ ಇನ್ಮುಂದೆ ಮೊಗವೀರ ಸಮುದಾಯದ ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗಕ್ಕೆ ಸೇರುವಂತ ಓರ್ವ ಉತ್ತಮ ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ.25,000 ಸಹಾಯ ದಿನ ನೀಡಲಾಗುವುದು ಎಂಬುದಾಗಿ ಘೋಷಿಸಿದರು.

ಮೊಗವೀರ ಸಮಾಜದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಬೇಕು. ಸಮುದಾಯದಕ್ಕೆ ಕೀರ್ತಿ ತರುವಂತ ಕೆಲಸ ಮಾಡಬೇಕು. ಈ ಕೆಲಸ ಮುಂದೆ ಆಗಲಿ. ಸಾಗರ ತಾಲೂಕು ಮೊಗವೀರ ಮಹಾಸಭ ಮತ್ತಷ್ಟು ಜನಪರ ಕೆಲಸ ಮಾಡುವಂತೆ ಆಗಲಿ ಎಂದರು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ಸಂತಸದ ಸಂಗತಿಯಾಗಿದೆ. ಇಂತಹ ಕಾಯರ್ಯಕ್ರಮದಲ್ಲಿ ಭಾಗಿಯೋಗುವುದು ಹೆಮ್ಮೆಯ ವಿಚಾರವಾಗಿದೆ. ಮೊಗವೀರ ಸಮಾಜ ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಅಂತ ಆಶಿಸಿದರು.

ಉಡುಪಿಯ ಮೊಗವೀರ ಯುವ ಸಂಘಟನೆಯ ಜಯಂತ್ ಅಮೀನ್ ಕೊಡಿ ಅವರು ಮಾತನಾಡಿ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಮೊಗವೀರ ಸಮುದಾಯದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಬೇಕು. ಉತ್ತಮ ಸಾಧನೆಯ ಮೂಲಕ ಸಮಾಜಕ್ಕೆ, ಪೋಷಕರಿಗೆ ಹೆಸರು ತರುವಂತ ಕೆಲಸ ಮಾಡಲಿ ಎಂದರು.

ಪಿಯುಸಿಯಲ್ಲಿ ಅಂತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮೊಗವೀರ ಸಮುದಾಯದ ಪ್ರವೀರ ಹೆಚ್.ಆರ್, ದೀಪಿಕಾ ಹೆಚ್.ಎನ್, ಶ್ಯಾಮಲಾ ಎಸ್, ನಮನ ಹೆಚ್ ಬಿ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆ ವಿದ್ಯಾರ್ಥಿಗಳಿಗ ಸನ್ಮಾನ

ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಂತ ಮೊಗವೀರ ಸಮಾಜದ ಸೂರಜ್ ಸಿ, ಪಲ್ಲವಿ ಆರ್, ರಾಘವಿ, ಸೃಷ್ಠಿ ಹೆಚ್ ಮೊಗವೀರ, ಶುಭ ಆರ್, ವರ್ಷಿಣಿ, ನಿಖಿತ.ಆರ್, ಸಮಿತ ಎನ್ ಹಾಗೂ ನಮೀತಾ ಎಂ.ಕೆ ಅವರಿಗೆ ಸನ್ಮಾನಿಸಲಾಯಿತು.

ಇವರಲ್ಲದೇ ಮೊಗವೀರ ಸಮುದಾಯದ ಇನ್ನೂ ಅನೇಕ ಸಾಧಕರಿಗೆ ಸಾಗರ ತಾಲೂಕು ಮೊಗವೀರ ಮಹಾಸಭದಿಂದ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಇದೇ ಸಂದರ್ಭದಲ್ಲಿ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದಂತ ನಾಗರಾಜ್ ಆರ್ ಬಿಲಗುಂಜಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಗ್ಗೋಡು, ಕೋಶಾಧಿಕಾರಿ ವಾಸುದೇವ್ ಸ್ ಎನ್ ನಗರ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು.

ವರದಿ: ಉಮೇಶ್ ಮೊಗವೀರ, ಸಾಗರ

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

Share.
Exit mobile version