ಒಂದು ಪ್ರದೇಶವು ಪ್ರವಾಹದಿಂದ ಮುಳುಗಿದರೆ, ಸಾಕಷ್ಟು ಮನೆ, ಆಸ್ತಿ ನಷ್ಟವಾಗುತ್ತದೆ. ಇದರಿಂದ ಜನರು ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಇದಕ್ಕೆ ಪರಿಹಾರವೆಂಬಂತೆ ಜಪಾನಿನ ಕಂಪನಿಯೊಂದು ತೇಲುವ ಮನೆ(Floating House)ಯನ್ನು ಕಂಡುಹಿಡಿದಿದೆ.
ಹೌದು, ಜಪಾನ್ ಮೂಲದ ವಸತಿ ಅಭಿವೃದ್ಧಿ ಕಂಪನಿಯಾದ ಇಚಿಜೊ ಕೊಮುಟೆನ್, ಪ್ರವಾಹ ಪೀಡಿತ ದೇಶಗಳ ಸಮಸ್ಯೆಯನ್ನು ಪರಿಹರಿಸಿದೆ ಎಂದು ಹೇಳಿಕೊಂಡಿದೆ. ಕಂಪನಿಯು ಪ್ರವಾಹ ತೇಲುವ ಮನೆಯನ್ನು ಕಂಡುಹಿಡಿದಿದೆ. ಮನೆಯು ರಚನೆಯಲ್ಲಿ ವಿಶಿಷ್ಟವಾಗಿದೆ. ಏಕೆಂದರೆ, ಇದು ಜಲನಿರೋಧಕವಾಗಿದ್ದು, ನೀರಿನ ಮಟ್ಟ ಹೆಚ್ಚಾದ ತಕ್ಷಣ ಮನೆ ತೇಲಲು ಪ್ರಾರಂಭಿಸುತ್ತದೆ ಎಂದು ಕಂಪನಿ ಹೇಳಿದೆ.
ಕಂಪನಿಯು ಟಿಬಿಎಸ್ ಟಿವಿ ಸ್ಟೇಷನ್‌ಗೆ ನೀಡಿದ ಸಂದರ್ಶನದಲ್ಲಿ, “ಮನೆಯು ಸಾಮಾನ್ಯ ಮನೆಯಂತೆ ಕಾಣುತ್ತದೆ. ಆದರೆ, ಅದರ ಸುತ್ತಲೂ ನೀರು ತುಂಬಲು ಪ್ರಾರಂಭಿಸಿದಾಗ, ಮನೆ ನಿಧಾನವಾಗಿ ನೆಲವನ್ನು ಬಿಟ್ಟು ಮೇಲಕ್ಕೆ ಏರಿ ತೇಲಲು ಪ್ರಾರಂಭಿಸಿಸುತ್ತದೆ ಎಂದಿದೆ. ಈ ಮನೆಯು ದಪ್ಪ ಕಬ್ಬಿಣದ ರಾಡ್‌ಗಳಿಂದ ಸಂಪರ್ಕ ಹೊಂದಿದೆ. ಇದು ದಪ್ಪವಾದ ಕೇಬಲ್‌ಗಳಿಂದ ನೆಲಕ್ಕೆ ಸಂಪರ್ಕ ಹೊಂದಿದೆ. ಇದು ಪ್ರವಾಹಗಳು ಸಂಭವಿಸಿದಾಗ ಮನೆಯನ್ನು ಮೇಲಕ್ಕೆ ಬಿಡುಗಡೆ ಮಾಡುತ್ತದೆ ಮತ್ತು ಪ್ರವಾಹ ಮುಗಿದ ತಕ್ಷಣ ಅದನ್ನು ಮತ್ತೆ ನೆಲಕ್ಕೆ ಜೋಡಿಸುತ್ತದೆ. ನೀರು ಕಡಿಮೆಯಾದಂತೆ ಮನೆ ನೆಲ ಮುಟ್ಟುತ್ತದೆ. ಅಲ್ಲಿಗೆ ನೀರು ಬರದಂತೆ ಮೇಲ್ಮುಖವಾಗಿ ವಿದ್ಯುತ್ ಅಳವಡಿಸಲಾಗಿದ್ದು, ಮನೆ 5 ಮೀಟರ್ ಎತ್ತರದಲ್ಲಿ ತೇಲುತ್ತದೆ ಎಂದಿದೆ. ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Ichijo Komuten ರಚಿಸಿದ ತೇಲುವ ಮನೆ ಪ್ರದರ್ಶನದ ಈ ವೀಡಿಯೊ ಇಲ್ಲಿದೆ ನೋಡಿ…
Video: ತಂಗಿ ಮದುವೆಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಣ್ಣ: ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆ ಏರಿದ ಮಗಳು