ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇದೀಗ ನಾಲ್ಕು ಪ್ರಕರಣಗಳಿಂದ ರೆಡ್ಡಿಗೆ ಮುಕ್ತಿ ಸಿಕ್ಕಿದೆ.

ಹೌದು, ಕಳೆದ ವರ್ಷ ಐಟಿ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣಗಳ ತನಿಖೆ ರದ್ದುಗೊಳಿಸಿ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಕೇಸ್ ಕ್ಲೋಸ್ ಮಾಡಿದ್ದಾರೆ. ಸಿಸಿಹೆಚ್ 47 ನೇ ನ್ಯಾಯಾಧೀಶೆ ಈ ಚಂದ್ರಕಲಾ ಆದೇಶ ಹೊರಡಿಸಿದ್ದಾರೆ.

ಗಣಪತಿ ಡೀಲ್ಕಾಮ್ PVT LTD V.S ಕೇಂದ್ರ ಸರ್ಕಾರದ ಕೇಸ್, 2016 ರ ಬೇನಾಮಿ ವ್ಯವಹಾರ ನಿರ್ಬಂಧ ಕಾಯ್ದೆಯಡಿ ಕೇಸ್ ಹಾಗೂ 2021 ರ ಮೇ 28 ನೇ ತಾರೀಖಿನಂದು ನಾಲ್ಕು ಕೇಸ್ ದಾಖಲಾಗಿತ್ತು.  2009 ರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಐಟಿ ಅಧಿಕಾರಿಗಳು ಆರೋಪಿಸಿ ಕೇಸ್ ದಾಖಲಿಸಿದ್ದರು.ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇದೀಗ ನಾಲ್ಕು ಪ್ರಕರಣಗಳಿಂದ ರೆಡ್ಡಿಗೆ ಮುಕ್ತಿ ಸಿಕ್ಕಿದೆ.

HEALTH TIPS: ಚಳಿಗಾಲದಲ್ಲಿ ಹಾಲು ಕುಡಿಯುವ ಅಭ್ಯಾಸವಿದ್ದೀಯಾ? ಇಲ್ಲಿದೆ ಹೆಚ್ಚು ಪ್ರಯೋಜನಕಾರಿ ಅಂಶಗಳು

BREAKING NEWS : ‘ವಿದೇಶಿ ಬೆಟ್ಟಿಂಗ್ ಜಾಹೀರಾತು’ ಪ್ರಸಾರ ಮಾಡ್ಬೇಡಿ ; ‘ಗೂಗಲ್-ಯೂಟ್ಯೂಬ್’ಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ |Foreign betting advertisements

Share.
Exit mobile version