ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಕಿಶ್ತ್ವಾರ್ ನ ಕೇಶವಾನ್ ನಲ್ಲಿ ‘ಇಕೋ’ ವಾಹನ ಅಪಘಾತ ಸಂಭವಿಸಿದ್ದು, ಆರು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಸ್ಥಳದಲ್ಲಿ ಐದು ಮಂದಿ ಮೃತಪಟ್ಟಿದ್ದರೆ, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಗಳನ್ನು ಲಾಟಿಫ್ ರಾಥರ್, ಅಬ್ದುಲ್ ರೆಹ್ಮಾನ್ ಬಟ್, ಮೊಹಮ್ಮದ್ ಇರ್ಫಾನ್, ಗುಲಾಮ್ ಹಸನ್ ಮತ್ತು ಜುಬೇರ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING NEWS: ʼಕ್ರಿಪ್ಟೋಕರೆನ್ಸಿʼ ಎಂದಿಗೂ ಕಾನೂನುಬದ್ಧ ಟೆಂಡರ್ ಆಗೋದಿಲ್ಲ : ಹಣಕಾಸು ಕಾರ್ಯದರ್ಶಿ