ರಾಂಬನ್ (ಜಮ್ಮು ಮತ್ತು ಕಾಶ್ಮೀರ): ಹವಾಮಾನ ವೈಪರೀತ್ಯ ಮತ್ತು ಭೂಕುಸಿತದ ಕಾರಣ ರಾಂಬನ್ ಮತ್ತು ಬನಿಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆಯ ಮಧ್ಯಾಹ್ನದ ಹಂತವನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಇಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ʻಹವಾಮಾನ ಪರಿಸ್ಥಿತಿಗಳು ಮತ್ತು ಈ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದಿಂದ ರಾಂಬನ್ ಮತ್ತು ಬನಿಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆಯ ಮಧ್ಯಾಹ್ನದ ಹಂತವನ್ನು ರದ್ದುಗೊಳಿಸಲಾಗಿದೆ. ನಾಳೆ ವಿಶ್ರಾಂತಿ ದಿನವಾಗಿದ್ದು, ಜನವರಿ 27 ರ ಬೆಳಿಗ್ಗೆ 8 ಗಂಟೆಗೆ ಯಾತ್ರೆ ಪುನರಾರಂಭವಾಗಲಿದೆʼ ಎಂದು ಮಾಹಿತಿ ನೀಡಿದ್ದಾರೆ.
Due to poor weather conditions and landslides in the area, the afternoon leg of #BharatJodoYatra in Ramban & Banihal has been cancelled. Tomorrow is a rest day and the Yatra will resume day after, January 27th at 8am.
— Jairam Ramesh (@Jairam_Ramesh) January 25, 2023
ಇಂದು ಬೆಳಗ್ಗೆ ರಾಂಬನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಹವಾಮಾನ ಸುಧಾರಿಸಿದ ನಂತರ ಹೆದ್ದಾರಿಯನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS: ಫೆ 13ರಿಂದ ಬೆಂಗಳೂರು ಏರ್ ಶೋ; ಟಿಕೆಟ್ ದರ ಎಷ್ಟು? ಇಲ್ಲಿದೆ ಮಾಹಿತಿ
BIGG NEWS: ಫೆ 13ರಿಂದ ಬೆಂಗಳೂರು ಏರ್ ಶೋ; ಟಿಕೆಟ್ ದರ ಎಷ್ಟು? ಇಲ್ಲಿದೆ ಮಾಹಿತಿ