ಸಿನಿಮಾ ಡೆಸ್ಕ್ : ಕರ್ನಾಟಕದಲ್ಲಿ ಹಿಂದಿ ವಿಚಾರ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಇಷ್ಟು ದಿನ ಹಿಂದಿ ಹೇರಿಕೆಗೆ ಹೊರಟಿದ್ದ ಕೇಂದ್ರ ಸರ್ಕಾರದ ವಿರುದ್ಧ ಜನರು ಹೋರಾಡಿದ್ದಾಯಿತು. ಇದೀಗ ಸಿನಿಮಾವೊಂದು ಹಿಂದಿಮಯವಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅದರಲ್ಲೂ ಜಗ್ಗೇಶ್ ಅವರ ಸಿನಿಮಾದಲ್ಲಿ ಇಂತ ಅಚಾತುರ್ಯ ನಡೆದಿರೋದು ಶಾಕಿಂಗ್ ವಿಚಾರ. ಯಾಕಂದ್ರೆ ನಟ ಜಗ್ಗೇಶ್ ಅವರು ಯಾವಾಗಲೂ ಕನ್ನಡ ಪರವಾಗಿ ಧ್ವನಿ ಎತ್ತುವವರು. ಕನ್ನಡ ಉಳಿವಿಗಾಗಿ ಸದಾ ಮುಂದು. ಅವರ ಸೋಶಿಯಲ್ ಮೀಡಿಯಾದಲ್ಲೂ ಕನ್ನಡವೇ ರಾರಾಜಿಸುತ್ತಿರುತ್ತೆ. ಆದ್ರೆ ಇದೀಗ ಅವರದ್ದೇ ಸಿನಿಮಾದಲ್ಲಿ ಇಂಥ ಯಡವಟ್ಟಾಗಿದೆ.
ತೋತಾಪುರಿ ಸಿನಿಮಾ ಬಗ್ಗೆ ನೀವೆಲ್ಲಾ ಈಗಾಗಲೇ ಸಾಕಷ್ಟು ವಿಚಾರ ತಿಳಿದುಕೊಂಡಿದ್ದೀರಾ. ತೋತಾಪುರಿ ಫುಲ್ ಮನರಂಜನೆ ನೀಡುವ ಸಿನಿಮಾ. ಆ ಸಿನಿಮಾ ನೋಡೋದಕ್ಕಾಗಿಯೇ ಸಾಕಷ್ಟು ಸಿನಿಪ್ರೇಮಿಗಳು ವೈಟಿಂಗ್ ನಲ್ಲಿದ್ದಾರೆ. ನೀರ್ ದೋಸೆ ಸಿನಿಮಾದ ಕಾಂಬೀನೇಷನ್ ಕೂಡ ಅಂತದ್ದೊಂದು ಕಾತುರಕ್ಕೆ ಕಾರಣವಾಗಿದೆ. ಆದ್ರೆ ಸಿನಿಪ್ರೇಮಿಗಳಿಗೆ ಇಷ್ಟೆಲ್ಲಾ ಖುಷಿ ಕೊಡಲು ಸಿದ್ಧವಾದ ಸಿನಿಮಾದಿಂದ ಪ್ರಮಾದವೊಂದು ನಡೆದಿದೆ. ಅದು ಪ್ರಮಾದವೋ, ಇಲ್ಲ ಯಡವಟ್ಟೋ ತಿಳಿಯದು. ಆದ್ರೆ ಕನ್ನಡ ಪ್ರೇಮಿಗಳನ್ನು ಮಾತ್ರ ಕೆಣಕಿದೆ.
ಕಾಮಿಡಿ ಜಾನರ್ ನ ಸಿನಿಮಾ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಸಣ್ಣ ಝಲಕ್ ಎಂಬಂತೆ ಆಡಿಯೋ ಟೀಸರ್ ರಿಲೀಸ್ ಆಗಿದೆ. ಇದು ಕನ್ನಡ ಸಾಹಿತ್ಯವಿರುವ ಹಾಡಿನಲ್ಲಿ ಬರೀ ಹಿಂದಿಯಿದೆ. ಇದಕ್ಕೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಓಕೆ ಆದ್ರೆ ಹಿಂದಿ ಹೇರಿಕೆ ಯಾಕೆ.. ಕನ್ನಡ, ನಾಡು-ನುಡಿ ಸಂಸ್ಕೃತಿ ಎಂದು ಹೇಳಿಕೊಳ್ಳುವ ಜಗ್ಗೇಶ್ ನಟನೆಯ ಸಿನಿಮಾದಲ್ಲೇ ಹೀಗಾದರೆ ಹೇಗೆ..? ಎಂದು ಪ್ರಶ್ನಿಸುತ್ತಿದ್ದಾರೆ.