ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚೆಗೆ ವಿದ್ಯುತ್‌ ದರ ಏರಿಕೆಯಾಗಿದೆ. ನಾವು ಬಳಸಿದ ರೀತಿಯಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ. ಮೀಟರ್‌ ರೀಡಿಂಗ್‌ ಬಳಿಕ, ಎಷ್ಟು ಯುನಿಟ್‌ ವಿದ್ಯುತ್‌ ಬಳಸಿದ್ದೇವೆ ಎಂಬುದರ ಮೇಲೆ ಬಿಲ್‌ ಮೊತ್ತ ನಿಗದಿಯಾಗುತ್ತದೆ. ನಾವು ಜಾಸ್ತಿ ವಿದ್ಯುತ್‌ ಬಳಸಿದರೆ, ಬಿಲ್‌ ಕೂಡಾ ಸಹಜವಾಗಿ ಹೆಚ್ಚುತ್ತದೆ. ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿರುತ್ತದೆ.

SKIN CARE TIPS: ಚಳಿಗಾಲದಲ್ಲಿ ಕಾಡುವ ‘ಒಣ ಚರ್ಮ’ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು, ಒಮ್ಮೆ ಟ್ರೈ ಮಾಡಿ | Dry Skin

 

ಇದನ್ನು ತಪ್ಪಿಸಲು ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು. ಅದರಲ್ಲೂ ಮನೆಯಲ್ಲಿರುವ ವಿದ್ಯುತ್ ದೀಪಗಳು, ಫ್ಯಾನ್‌ಗಳನ್ನು ಹೆಚ್ಚಿಗೆ ಬಳಸಿದರೆ ಜಾಸ್ತಿ ಬಿಲ್ ಬರುತ್ತದೆ ಎಂದು ಭಯ ಪಡಬೇಕಾಗಿಲ್ಲ. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಮನೆಯಲ್ಲಿ ಬಳಕೆಯಲ್ಲಿಲ್ಲದ ದೀಪಗಳನ್ನು ಆಫ್ ಮಾಡುವುದು. ಹೆಚ್ಚಿನ ಮನೆಗಳಲ್ಲಿ ಇಂತಹ ತಪ್ಪುಗಳಿಂದಲೇ ವಿದ್ಯುತ್‌ ಪೋಲಾಗುತ್ತದೆ. ಇದರೊಂದಿಗೆ ಬಿಲ್‌ ಕೂಡಾ ಹೆಚ್ಚಾಗುತ್ತದೆ.ಬಳಕೆಯಲ್ಲಿಲ್ಲದಿದ್ದಾಗ ಇತರ ವಿದ್ಯುತ್ ಉಪಕರಣಗಳನ್ನು ಅನ್ ಪ್ಲಗ್ ಮಾಡುವುದು ಒಳ್ಳೆಯದು. ಅಗತ್ಯವಿಲ್ಲದಿದ್ದಾಗ ದೀಪಗಳನ್ನು ಆಫ್ ಮಾಡುವುದರಿಂದ ವಿದ್ಯುತ್ ಉಳಿತಾಯ ಮಾತ್ರವಲ್ಲ, ಪರಿಸರಕ್ಕೆ ಹಾನಿ ಮಾಡುವ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

SKIN CARE TIPS: ಚಳಿಗಾಲದಲ್ಲಿ ಕಾಡುವ ‘ಒಣ ಚರ್ಮ’ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು, ಒಮ್ಮೆ ಟ್ರೈ ಮಾಡಿ | Dry Skin

 

ವಿದ್ಯುತ್‌ ಬಿಲ್‌ ಕಡಿಮೆ ಬರುವಂತೆ ಮಾಡುವುದು, ವಿದ್ಯುತ್‌ ಸರಬರಾಜು ಮಾಡುವ ನಿಗಮಗಳ ಕೈಯಲ್ಲಿಲ್ಲ. ಬದಲಾಗಿ ಅದು ನಿಮ್ಮ ಮೇಲಿದೆ. ನೀವು ವಿದ್ಯುತ್‌ ಬಳಸುವಾಗ ವಿವೇಚನೆ ಬಳಸಿದರೆ, ನಿಮ್ಮ ಕೈಗೆ ಸಿಗುವ ಬಿಲ್‌ ಚಿಕ್ಕದಾಗುತ್ತದೆ.
ದೀಪಗಳನ್ನು ಆಫ್ ಮಾಡುವುದರಿಂದ ಎಷ್ಟು ಕರೆಂಟ್ ಉಳಿಸಬಹುದು?
ನಮ್ಮ ವಿದ್ಯುತ್ ಉಳಿತಾಯವು ನಾವು ಮನೆಯಲ್ಲಿ ಬಳಸುವ ಬೆಳಕಿನ ಬಲ್ಬ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಒದಗಿಸುವ ಬೆಳಕಿನ ಪ್ರಮಾಣವು ಬಲ್ಬ್‌ನ ತಾಪಮಾನ ಮತ್ತು ಅದು ಸೇವಿಸುವ ವಿದ್ಯುತ್ ಪ್ರಮಾಣವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 40 ವ್ಯಾಟ್ ಬಲ್ಬ್ ಒಂದು ಗಂಟೆಯಲ್ಲಿ 0.04 kWh ವಿದ್ಯುತ್ ಬಳಸುತ್ತದೆ. ಹೀಗಾಗಿ ಅಗತ್ಯವಿಲ್ಲದಿದ್ದಾಗ ಲೈಟ್ ಆಫ್ ಮಾಡುವುದರಿಂದ ಅರ್ಧದಷ್ಟು ವಿದ್ಯುತ್ ಉಳಿಸಬಹುದು. ಒಂದು ತಿಂಗಳು ಹೀಗೆ ಮಾಡಿದರೆ ಎಷ್ಟು ವಿದ್ಯುತ್ ಉಳಿತಾಯ ಮಾಡಬಹುದು ಎಂಬುದನ್ನು ನೀವೇ ಲೆಕ್ಕ ಹಾಕಿ.
ಕೇವಲ 40 ವ್ಯಾಟ್ ಬಲ್ಬ್ ಅನ್ನು ಎಚ್ಚರಿಕೆಯಿಂದ ಬಳಸುವುದರಿಂದ ವಿದ್ಯುಚ್ಛಕ್ತಿಯನ್ನು ಉಳಿಸಬಹುದು. ಆದರೆ ಹೆಚ್ಚು ತಾಪಮಾನದ ಬಲ್ಬ್‌ಗಳ ಬಳಕೆಯನ್ನು ನಿಯಂತ್ರಿಸುವುದರಿಂದ ಇನ್ನಷ್ಟು ಉಳಿತಾಯ ಮಾಡಬಹುದು. ಹೆಚ್ಚಿಗೆ ವ್ಯಾಟ್‌ ಇರುವ ಬಲ್ಬ್‌ನಲ್ಲಿ ಹೆಚ್ಚಿಗೆ ವಿದ್ಯುತ್‌ ಅದರ ತಾಪಮಾನಕ್ಕೆ ಪೋಲಾಗುತ್ತದೆ. ಅದರಿಂದ ಹೊರಬರುವ ಬೆಳಕಿನ ಪ್ರಮಾಣ ಕಡಿಮೆ. ಒಂದು ತಿಂಗಳ ಕಾಲ ದಿನಕ್ಕೆ ಒಂದು ಗಂಟೆ ಬಲ್ಬ್‌ಗಳನ್ನು ಆಫ್ ಮಾಡುವುದರಿಂದ ವಿದ್ಯುತ್ ಬಿಲ್‌ಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

Share.
Exit mobile version