ಬೆಂಗಳೂರು: ಕೇಂದ್ರ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಉದ್ದೇಶ ಪೂರಿತವಾಗಿ, ರಾಜಕೀಯ ಪಿತೂರಿಯಿಂದಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾಯಕ ರಾಹಲ್ ಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ. ಈ ದೇಶದಲ್ಲಿ 50 ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆ ಮಾಡಿತ್ತು. ಆಗ ಬಿಜೆಪಿಯವರಿಗೆ ಯಾರಿಗಾದ್ರೂ ತೊಂದ್ರೇ ಕೊಟ್ಟಿತ್ತಾ.? ಬರೀ ಕಾಂಗ್ರೆಸ್ ನವರು ಮಾತ್ರ ತಪ್ಪು ಮಾಡಿರೋದಾ.? ಬಿಜೆಪಿಯವರು ತಪ್ಪೇ ಮಾಡಿಲ್ವಾ ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಹೇಳ್ತಾ ಇರೋದು ಸುಳ್ಳು: 75 ವರ್ಷಗಳ ಅಭಿವೃದ್ಧಿ 8 ವರ್ಷಗಳಲ್ಲಿ ಆಗಿದ್ದಲ್ಲ – HDK
ನಗರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಡಿ ಕಿರುಕುಳ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನ್ಯಾಷನಲ್ ಹೆರಾಲ್ಡ್ ಕೇಸ್ 10 ವರ್ಷಗಳ ಹಿಂದೆ ಕ್ಲೋಸ್ ಆಗಿರೋ ಕೇಸ್ ಆಗಿದೆ. ರೀ ಓಪನ್ ಮಾಡಿ ಈಗ ತನಿಖೆ ನಡೆಸಲಾಗುತ್ತಿದೆ. ಆಯ್ತು ರೀ ಓಪನ್ ಮಾಡಿದ್ದೀರಾ ಮಾಡಿ, ಯಾವಾನಾದ್ರು ತನಿಖೆ 54 ಗಂಟೆಯವರೆಗೆ ಮಾಡ್ತಾರಾ.? ತನಿಖೆ ಅಷ್ಟು ಗಂಟೆಯವರೆಗೆ ಮಾಡೋದಕ್ಕೆ ಏನ್ ಇತ್ತು.? ಬರೀ ಇವರ ಉದ್ದೇಶ ಒಂದೇ.. ತೊಂದರೆ ಕೊಡಬೇಕು, ಭಯಪಡಿಸಬೇಕು ಅನ್ನೋದಾಗಿದೆ. ಆದ್ರೇ.. ಕಾಂಗ್ರೆಸ್ ಪಕ್ಷ ಇದಕ್ಕೆ ಹೆದರೋದಿಲ್ಲ. ಯಾವತ್ತಿನವರೆಗೂ ಇವರು ಕಿರುಕುಳ ನಿಲ್ಲಿಸೋದಿಲ್ಲವೇ ಅಲ್ಲಿಯವರೆಗೆ ಹೋರಾಟ ಮುಂದುವರೆಸೋದಾಗಿ ಹೇಳಿದರು.
ಬೇರೆಯವರು ಯಾರು ತಪ್ಪು ಮಾಡಿಲ್ವಾ..? ನಾವು ಮನೆ ಕಟ್ಟೋದನ್ನು ಸಹಿಸೋದಿಲ್ವಾ.? ನಾವು ಮನೆ ಕಟ್ಟೋದು ತಪ್ಪಾ.? ನಾವು ದೊಡ್ಡದಾಗಿ ಮನೆ ಕಟ್ಟಿದ್ದೇ ತಪ್ಪಾ ಎಂದು ಖಾರವಾಗಿಯೋ ಪ್ರತಿಕ್ರಿಯಿಸಿದರು.
ಇದು ಕ್ಲೇಸ್ ಕ್ಲೋಸ್ ಆಗಿದೆ. ಈ ಪ್ರಕರಣ 10 ವರ್ಷಗಳ ಹಿಂದೆ ಕ್ಲೋಸ್ ಆಗಿರೋ ಪ್ರಕರಣವಾಗಿದೆ. ರೀ ಓಪನ್ ಮಾಡೋ ಅಗತ್ಯವೇನಿತ್ತು.? ತನಿಖೆ ಮಾಡಿ, ಬೇಡ ಅನ್ನೋದಿಲ್ಲ. ಒಂದು ಗಂಟೆಯೋ, ಎರಡು ಗಂಟೆಯೋ ನಡೆಸಿ. 6ನೇ ದಿನ ಕರೆಸಿಕೊಂಡು 52 ಗಂಟೆಯವರೆಗೆ ತನಿಖೆ ಯಾಕೆ.? ಇದು ಬೇಕೆಂದೇ ನಮ್ಮ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಕಿರುಕುಳ ನೀಡುತ್ತಿರೋದಾಗಿದೆ ಎಂದರು.
BIG NEWS: ಯಾರ್ ಇವರಿಗೆ ‘ಅಗ್ನಿಪಥ್ ಯೋಜನೆ’ ಜಾರಿಗೆ ತರಲು ಹೇಳಿದ್ದು.? – ಮಾಜಿ ಸಿಎಂ ಕುಮಾರಸ್ವಾಮಿ
ಸ್ವಾಮಿ ಕಾಂಗ್ರೆಸ್ ನವರೇ ತಪ್ಪು ಮಾಡಿರೋದಾ.? ಬಿಜೆಪಿಯವರು ಯಾರೂ ತಪ್ಪು ಮಾಡಿಲ್ಲವಾ.? ಒಂದು ಉದಾಹರಣೆ ತೋರಿಸಿ ಬಿಜೆಪಿಯವರದ್ದು. ಇವರದ್ದೇ ಸರ್ಕಾರ, ನರೇಂದ್ರ ಮೋದಿಯವರು ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬೇರೆ ಪಕ್ಷದವರು ಮಾತ್ರವೇ ತಪ್ಪು ಮಾಡಿರೋದಾ.? ಬಿಜೆಪಿಯವರು ಯಾರೂ ತಪ್ಪು ಮಾಡಿಲ್ವಾ.? ದೇಶದಲ್ಲಿ ಕಾಂಗ್ರೆಸ್ ಒಂದು 50 ವರ್ಷ ಅಧಿಕಾರದಲ್ಲಿ ಇತ್ತು. ಬಿಜೆಪಿಯವರಿಗೆ ಯಾರಿಗಾದ್ರು ತೊಂದ್ರೇ ಕೊಟ್ಟಿದ್ದಾರಾ.? ಬಿಜೆಪಿ ಬೇಕೆಂದೇ ಇಡಿ ಮೂಲಕ ತೊಂದ್ರೇ ಕೊಡ್ತಾ ಇದೆ ಎಂಬುದಾಗಿ ವಾಗ್ದಾಳಿ ನಡೆಸಿದರು.