ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ… ಏನು ಮಾಡಬೇಕು? ಏನು ಅವಾಯ್ದ್ ಮಾಡಬೇಕು.. ಇಲ್ಲಿದೆ ಮಾಹಿತಿ – Kannada News Now


Health Lifestyle

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ… ಏನು ಮಾಡಬೇಕು? ಏನು ಅವಾಯ್ದ್ ಮಾಡಬೇಕು.. ಇಲ್ಲಿದೆ ಮಾಹಿತಿ

ಸ್ಪೆಷಲ್ ಡೆಸ್ಕ್ : ದೇಹದಲ್ಲಿ ರಕ್ತದ ಕೊರತೆ ಉಂಟಾದರೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಇದನ್ನ ನಿವಾರಣೆ ಮಾಡದೆ ಇದ್ದರೆ ಎದೆಯಲ್ಲಿ ನೋವು, ಸುಸ್ತು ಮತ್ತು ತಲೆತಿರುಗುವುದು ಮೊದಲಾದ ಸಮಸ್ಯೆಗಳು ಕಂಡುಬರುತ್ತವೆ. ರಕ್ತಹೀನತೆಗೆ ಮೊದಲಿಗೆ ನಿಮ್ಮ ದೇಹದಲ್ಲಿ ಐರನ್ ಅಂಶ ಹೆಚ್ಚಿಸಬೇಕು. ಅದಕ್ಕಾಗಿ ಏನು ಮಾಡಬೇಕು ನೋಡೋಣ….

ಇಲ್ಲಿ ಕೆಲವೊಂದಿಷ್ಟು ಡಯಟ್‌ಗಳನ್ನು ನೀಡಲಾಗುತ್ತದೆ. ಅವುಗಳನ್ನು ನೀವು ಪಾಲನೆ ಮಾಡಿದರೆ ರಕ್ತಹೀನತೆ ಸಮಸ್ಯೆ ನಿವಾರಣೆಯಾಗೋದು ಗ್ಯಾರಂಟಿ…

ಪ್ರತಿದಿನ ಪಾಲಕ್‌ ಜ್ಯೂಸ್‌ ಜೊತೆಗೆ ಜೇನನ್ನು ಮಿಕ್ಸ್‌ ಮಾಡಿ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರಕ್ತ ಹೆಚ್ಚಿಸುತ್ತದೆ. ಇಲ್ಲವಾದರೆ ಪಾಲಕ್‌ ಸಾರು ಅಥವಾ ಚಟ್ನಿ ಮಾಡಿ ಸೇವನೆ ಮಾಡಬಹುದು.

ಇದರಿಂದ ಲಾಭ ಏನು?
ಪಾಲಕ್‌ನಲ್ಲಿ ಐರನ್‌, ವಿಟಾಮಿನ್‌ ಬಿ12 ಮತ್ತು ಫಾಲಿಕ್‌ ಆಸಿಡ್‌ ಇದೆ. ಇದರ ಜೊತೆ ಜೇನು ಮಿಕ್ಸ್‌ ಮಾಡಿ ಸೇವಿಸಿದರೆ ದೇಹದಲ್ಲಿ ಐರನ್‌ ಹೆಚ್ಚುತ್ತದೆ. ಎನಿಮಿಯಾ ಸಮಸ್ಯೆ ದೂರವಾಗುತ್ತದೆ.

ಯಾವಾಗಲೂ ಅಡುಗೆ ಮಾಡುವಾಗ ಲೋಹದ ಕಡಾಯಿಯಲ್ಲಿ ಅಡುಗೆ ಮಾಡಿ. ಇದರಿಂದ ಆಹಾರದಲ್ಲಿ ಐರನ್‌ ಪ್ರಮಾಣ ಹೆಚ್ಚಾಗುತ್ತದೆ.

ಇವುಗಳನ್ನು ಅವಾಯ್ಡ್‌ ಮಾಡಿ :
ಕಾಫಿ ಮತ್ತು ಗ್ರೀನ್‌ ಟೀ ಸೇವನೆ ಮಾಡುವುದನ್ನು ಅವಾಯ್ಡ್‌ ಮಾಡಿ. ಇದರಿಂದ ದೇಹದಲ್ಲಿ ಐರನ್‌ ಪೂರ್ತಿಯಾಗಿ ಉಳಿದುಕೊಳ್ಳುವುದಿಲ್ಲ. ಅಲ್ಲದೆ ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ.