ಇರಾನ್‌: ಸೆಪ್ಟಂಬರ್ 16 ರಂದು ಕುರ್ದಿಶ್ ಮೂಲದ 22 ವರ್ಷದ ಇರಾನಿನ ಮಹ್ಸಾ ಅಮಿನಿ ಪೊಲೀಸ್‌ ಕಸ್ಟಡಿಯಲ್ಲಿದ್ದ ಸಾವನ್ನಪ್ಪಿದಾಗಿನಿಂದ ಪ್ರಚೋದಿಸಲ್ಪಟ್ಟ ಪ್ರತಿಭಟನಾ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ ಇರಾನ್ ನಟಿಯನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

38 ವರ್ಷದ ತರನೆಹ್ ಅಲಿದೋಸ್ತಿ ಬಂಧನಕ್ಕೊಳಗಾದ ನಟಿ. ತರನೆಹ್ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ನೀಡಿದ್ದರಿಂದ ಈ ಬಂಧನವಾಗಿದೆ. ತರನೆಹ್ 2016 ರ ಚಲನಚಿತ್ರ “ದಿ ಸೇಲ್ಸ್‌ಮ್ಯಾನ್” ನಲ್ಲಿನ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

ಹಿಜಾಬ್‌ ಪ್ರತಿಭಟನೆಯ ವಿರುದ್ದ ಹೋರಾಡುತ್ತಿದ್ದ ಮೊಹ್ಸೆನ್ ಶೇಕರಿ(23) ಎಂಬುವರನ್ನು ಡಿಸೆಂಬರ್ 8 ರಂದು ಮರಣದಂಡನೆ ಶಿಕ್ಷೆ ನೀಡಲಾಗಿತ್ತು. ಈತ ಅಧಿಕಾರಿಗಳಿಂದ ಮರಣದಂಡನೆಗೆ ಒಳಗಾದ ಮೊದಲ ವ್ಯಕ್ತಿಯಾಗಿದ್ದಾರೆ. ಅಂದೇ ತರನೆಹ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದರು.

“ಈ ರಕ್ತಪಾತವನ್ನು ನೋಡುತ್ತಿರುವ ಮತ್ತು ಕ್ರಮ ತೆಗೆದುಕೊಳ್ಳದಿರುವ ಪ್ರತಿಯೊಂದು ಅಂತರರಾಷ್ಟ್ರೀಯ ಸಂಸ್ಥೆಯು ಮಾನವೀಯತೆಗೆ ಅವಮಾನವಾಗಿದೆ” ಎಂದು ತರನೆಹ್ ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ತಾಂತ್ರಿಕ ದೋಷ: ಹೈದರಾಬಾದ್‌ನಿಂದ ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್

WATCH VIDEO: ಬೆಂಗಳೂರು-ಉಡುಪಿ ನಡುವಿನ ರೈಲು ಸಂಚಾರದ ಅದ್ಭುತ ವಿಡಿಯೋ ವೈರಲ್

ತಾಂತ್ರಿಕ ದೋಷ: ಹೈದರಾಬಾದ್‌ನಿಂದ ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್

WATCH VIDEO: ಬೆಂಗಳೂರು-ಉಡುಪಿ ನಡುವಿನ ರೈಲು ಸಂಚಾರದ ಅದ್ಭುತ ವಿಡಿಯೋ ವೈರಲ್

Share.
Exit mobile version