ಇರಾನ್  : ಪೊಲೀಸರ ಕಸ್ಟಡಿಯಲ್ಲಿದ್ದ ಯುವತಿ ಸಾವನ್ನಪ್ಪಿದ ಬಳಿಕ ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭಗಿಲೆದ್ದಿದ್ದವು.  ಇನ್ನು ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇರಾನ್ ಪ್ರಮುಖ ನಟಿ ತರನೆಹ್ ಅಲಿದೋಸ್ತಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಸುಳ್ಳು ಮತ್ತು ತಿರುಚಿದ ವಿಷಯವನ್ನು ಪ್ರಕಟಿಸಿ ಅವ್ಯವಸ್ಥೆಯನ್ನು ಪ್ರಚೋದಿಸಿದ್ದಕ್ಕಾಗಿ ತರನೆಹ್ ಅಲಿದೋಸ್ತಿ(38) ಅವರನ್ನು ಬಂಧಿಸಲಾಗಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

2016 ರ ಚಲನಚಿತ್ರ “ದಿ ಸೇಲ್ಸ್‌ಮ್ಯಾನ್” ನಲ್ಲಿನ ಪಾತ್ರಕ್ಕಾಗಿ ತರನೆಹ್ ಅಲಿದೋಸ್ತಿಯವರು ಆಸ್ಕರ್ ಪ್ರಶಸ್ತಿ ಪಡೆದಿದ್ದರು.

ಅಲಿದೂಸ್ತಿಯವರು ಪ್ರತಿಭಟನೆ ಕುರಿತಂತೆ ತಮ್ಮ ಇಸ್ಟಾಗ್ರಾಮ್ ಪೋಸ್ಟ್ ನಲ್ಲಿ, ಇರಾನ್ ನಲ್ಲಿ ನಡೆಯುತ್ತಿರುವ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿ ಟಿಪ್ಪಣಿ ಬರೆದಿದ್ದರು.

ಈ ರಕ್ತಪಾತವನ್ನು ನೋಡುತ್ತಿರುವ ಮತ್ತು ಕ್ರಮ ತೆಗೆದುಕೊಳ್ಳದಿರುವ ಪ್ರತಿಯೊಂದು ಅಂತಾರಾಷ್ಟ್ರೀಯ ಸಂಸ್ಥೆಯು ಮಾನವೀಯತೆಗೆ ಅವಮಾನವಾಗಿದೆ ಎಂದು ಅಲಿದೋಸ್ತಿ ಪೋಸ್ಟ್‌ ಮಾಡಿದ್ದರು.

ಅಲಿದೂಸ್ತಿ ಇರಾನಿನ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿದ್ದು, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ”ಲೀಲಾಸ್ ಬ್ರದರ್ಸ್ ಚಿತ್ರದಲ್ಲಿ ನಟಿಸಿದ್ದಾರೆ.

ಸೆಪ್ಟಂಬರ್ 16 ರಂದು ಕುರ್ದಿಶ್ ಮೂಲದ 22 ವರ್ಷದ ಇರಾನಿನ ಮಹ್ಸಾ ಅಮಿನಿ ಸಾವಿನಿಂದ ಪ್ರಚೋದಿಸಲ್ಪಟ್ಟ ಪ್ರತಿಭಟನೆಗಳಿಂದ ತತ್ತರಿಸಿದೆ. ದೇಶದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಯಿತು.

BIG NEWS : ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿ: ಮೂವರು ಸಾವು, ಹಲವರಿಗೆ ಗಾಯ

BIG NEWS : ʻಭಾರತವು ವಸುದೈವ ಕುಟುಂಬಕಂ ಸಿದ್ಧಾಂತವನ್ನು ನಂಬುತ್ತದೆʼ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ

BIGG NEWS : ರಾಜ್ಯ ಸರ್ಕಾರದಿಂದ ನೆರೆ, ಪ್ರವಾಹ  ಸಂತ್ರಸ್ತರಿಗೆ ಗುಡ್ ನ್ಯೂಸ್ : ಪ್ರಕೃತಿ ವಿಕೋಪ ಪರಿಹಾರ ಪಾವತಿಗೆ ಅನುಮೋದನೆ

Share.
Exit mobile version