ಬೆಂಗಳೂರು: ನಗರದ ಜಂಟಿ ಸಂಚಾರ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ( IPS Officer Ravikanthe Gowda ) ಮನೆಯಲ್ಲೇ ಕಳ್ಳತನವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಮನೆ ಕೆಲಸದಾಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರದ ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆ ಕೆಲಸದಾಕೆ ಆರೋಪಿ ಅಂಕಿತಾ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
BIGG NEWS: ರಾಜ್ಯ ಸರ್ಕಾರದಿಂದ ಕ್ರಿಸ್‌ಮಸ್, ನ್ಯೂಇಯರ್ ಸೆಲೆಬ್ರೇಶನ್‌ಗೆ ಬ್ರೇಕ್.?
ಕಳೆದ ಮೂರು ವರ್ಷಗಳಿಂದ ರವಿಕಾಂತೇಗೌಡ ಮನೆಯಲ್ಲಿ ಆರೋಪಿ ಅಂಕಿತಾ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಅವರ ಮನೆಯಲ್ಲಿನ ಕೆಲ ವಸ್ತುಗಳು ನಾಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಅಂಕಿತಾ ಕೂಡ ನಾಪತ್ತೆಯಾಗಿದ್ದಳು. ಹೀಗಾಗಿ ಅವರ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಅಂಕಿತಾ ಹಾಗೂ ಮತ್ತೊಬ್ಬರ ವಿರುದ್ಧ ದೂರು ನೀಡಲಾಗಿತ್ತು.
ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಂತ ಸಂಜಯ್ ನಗರ ಠಾಣೆ ಪೊಲೀಸರು, ಹಾವೇರಿಯಲ್ಲಿ ಅಂಕಿತಾ ಬಂಧಿಸಿದ್ದರು. ಆದ್ರೇ ನಾನು ಕಳ್ಳತನ ಮಾಡಿಲ್ಲ, ಊರಿಗೆ ಹೋಗಿದ್ದೆ ಎಂದು ಪೊಲೀಸರ ಮುಂದೆ ಹೇಳಿದ್ದಾಗಿ ತಿಳಿದು ಬಂದಿದೆ. ಈಗ ತನಿಖೆ ಮುಂದುವರೆದಿದೆ.
`SSLC’ ವಿದ್ಯಾರ್ಥಿಗಳೇ ಗಮನಿಸಿ : ಮುಖ್ಯ ಪರೀಕ್ಷೆ ಮತ್ತು ಪೂರ್ವ ಸಿದ್ದತಾ ಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ