ಸುಭಾಷಿತ :

Monday, March 30 , 2020 1:06 PM

BIG BREAKING : ಡಿಸಿಎಂ ಆರೋಪಕ್ಕೆ ಕಣ್ಣೀರಿಟ್ಟ ಬೆಂಗಳೂರು ಪೊಲೀಸ್ ಆಯುಕ್ತರು : ಸೇವೆಯಿಂದ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ


Thursday, March 26th, 2020 7:55 pm

ಬೆಂಗಳೂರು : ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಧ್ಯೆ ಲಾಕ್ ಡೌನ್ ಸಂದರ್ಭದಲ್ಲಿಯೇ ಪೊಲೀಸರ ವರ್ತನೆಯಿಂದ ಕೋಪಗೊಂಡ ಉಪ ಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ್ ನಾರಾಯಣ, ಪೊಲೀಸರು ಹಣ ಪಡೆದು ಶಾಪ್ ತೆರೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸಭೆಯಲ್ಲಿ ಗಂಭೀರವಾಗಿ ಆರೋಪ ಮಾಡಿದರು. ಇದರಿಂದ ಬೇಸರಗೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐ ಯಾಂ ಡಿಸ್ಟರ್ಬ್ಡ್, ನನ್ನನ್ನು ಸೇವೆಯಿಂದ ಬಿಡುಗಡೆ ಮಾಡಿ ಬಿಡಿ ಸಾರ್ ಎಂಬುದಾಗಿ ಕಣ್ಣೀರಿಟ್ಟರು. ಅಲ್ಲದೇ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.

ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ್ ನಾರಾಯಣ, ಪೊಲೀಸರು ನಗದಲ್ಲಿ ಲಾಕ್ ಡೌನ್ ಆಗಿದ್ದರು, ಹಣ ಪಡೆದು ಅಂಗಡಿ ಓಪನ್ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.

ಈ ಆರೋಪದಿಂದ ಬೇಸರಗೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕೂಡಲೇ ಸಭೆಯಿಂದ ಎದ್ದು, ಕಣ್ಣೀರಿಡುತ್ತಲೇ ಹೊರನಡೆದರು. ಈ ವೇಳೆ ಸಮಾಧಾನಿಸಲು ತೊಡಗಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ, ಸಾರ್ ಐ ಯಾಂ ಡಿಸ್ಟರ್ಬ್ಡ್, ಪ್ಲೀಸ್ ನನ್ನನ್ನು ಸೇವೆಯಿಂದ ಬಿಡುಗಡೆ ಮಾಡಿ ಎಂಬುದಾಗಿ ಮನವಿ ಮಾಡಿದರು. ಆನಂತ್ರ ಮುಖ್ಯಮಂತ್ರಿಯವರೇ ಸಮಾಧಾನ ಮಾಡಿದ ಪ್ರಸಂಗ ನಡೆದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions