ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಅಕ್ಟೋಬರ್-ನವೆಂಬರ್ ನಲ್ಲಿ `IPL’ ಟೂರ್ನಿ? – Kannada News Now


Cricket Sports

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಅಕ್ಟೋಬರ್-ನವೆಂಬರ್ ನಲ್ಲಿ `IPL’ ಟೂರ್ನಿ?

ಮುಂಬೈ : ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕೊರೊನಾ ಲಾಕ್ ಡೌನ್ ನಿಂದ ಮುಂದೂಡಲಾಗಿದ್ದ ಐಪಿಎಲ್ ಟೂರ್ಟಿಯನ್ನು ಅಕ್ಟೋಬರ್-ನವೆಂಬರ್ ನಲ್ಲಿ ನಡೆಸಲು ಅವಕಾಶವಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವರ್ಷ ಟಿ20 ವಿಶ್ವಕಪ್ ನಡೆಯುವುದು ಅನುಮಾನವಾಗಿದೆ. ವಿಶ್ವಕಪ್ ರದ್ದುಗೊಂಡರೆ ಅಥವಾ ಮುಂದೂಡಲ್ಪಟ್ಟರೆ ಐಪಿಎಲ್ ಮಾತ್ರ ನಡೆಯಬಹುದು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಕಾರಣದಿಂದಾಗಿ ಉಂಟಾಗಿರುವ ಅನಿಶ್ಚಿತತೆಯನ್ನು ಎದುರಿಸಲು ಆಟಗಾರರು ತಮ್ಮ ಎಲ್ಲ ಮಾನಸಿಕ ಶಕ್ತಿಯನ್ನು ಒಟ್ಟುಗೂಡಿಸಬೇಕಾಗುತ್ತದೆ.  ಕನಿಷ್ಟ ನಾಲ್ಕು ತಿಂಗಳ ನಂತರ ಕ್ರಿಕೆಟ್ ಪ್ರಾರಂಭವಾಗಬಹುದು. ಕ್ರಿಕೆಟ್ ಅನ್ನು ಪುನರಾರಂಭಿಸಲು ಇನ್ನೂ ಎರಡು ತಿಂಗಳು ಅಥವಾ ನಾಲ್ಕು ತಿಂಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.