ಐಪಿಎಲ್ 2020: ಕೆಕೆಆರ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಸನ್ ರೈಸರ್ಸ್ – Kannada News Now


Cricket Sports

ಐಪಿಎಲ್ 2020: ಕೆಕೆಆರ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಸನ್ ರೈಸರ್ಸ್

ಅಬುಧಾಬಿ: ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ೨೦೨೦ ಪಂದ್ಯಾವಳಿಯಲ್ಲಿ ಕೆಕೆಆರ್ – ಹೈದರಾಬಾದ್ ನಡುವೆ ಇಂದು ಪಂದ್ಯ ನಡೆಯಲಿದ್ದು ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ನಾಯಕತ್ವ ಬದಲಾವಣೆ ಮಾಡಿಕೊಂಡರು, ಸೋಲಿನ ಸುಳಿಯಿಂದ ಹೊರಬರಲು ಕಷ್ಟಪಡುತ್ತಿದೆ. ಇದುವರೆಗೆ ಆಡಿದ 8 ಪಂದ್ಯದಲ್ಲಿ 4 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 4 ರಲ್ಲಿ ಸೋತಿದೆ.

ಈ ಆವೃತ್ತಿಯಲ್ಲಿ ರಸ್ಸೆಲ್ ಅವರ ದಾಂಡಿಯಿಂದ ಅತೀ ಹೆಚ್ಚು ಬಂದ ರನ್ 24 ಮಾತ್ರ. ಮುಂಬರುವ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ರಸ್ಸೆಲ್ ಬ್ಯಾಟಿಂಗ್ ನಲ್ಲಿ ಮಿಂಚಿದ್ರೆ ಕೆಕೆಆರ್ ಗೆ ಲಾಭವಾದೀತು. ಕೆಕೆಆರ್ 8 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.

ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೂ ಇದುವರೆಗೆ ಆಡಿದ 8 ಪಂದ್ಯದಲ್ಲಿ 3 ರಲ್ಲಿ ಗೆಲುವು ಸಾಧಿಸಿದ್ದು 5 ಪಂದ್ಯದಲ್ಲಿ ಸೋತಿದೆ. ಹೈದರಾಬಾದ್ 6 ಅಂಕದೊಂದಿಗೆ 5 ನೇ ಸ್ಥಾನದಲ್ಲಿದೆ.
error: Content is protected !!