ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್ ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷರು ಖಚಿತಪಡಿಸಿದ್ದಾರೆ. ಈ ಹಿಂದೆ , ಲೋಕಸಭೆ ಚುನಾವಣೆಯ ಕಾರಣ, ಐಪಿಎಲ್ 17ನೇ ಸೀಸನ್ ಯುಎಇ ಅಥವಾ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಊಹಾಪೋಹಗಳು ಇದ್ದವು. ಆದ್ರೆ, ಇದೀಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್‌ನ ಅಂತಿಮ ಪಂದ್ಯವನ್ನ ಮೇ 26ರಂದು ಆಡಬಹುದು. ಆದರೆ, ಅಂತಿಮ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 8ರಿಂದ 10 ದಿನಗಳ ಕಾಲಾವಕಾಶ ನೀಡಲು ಬಿಸಿಸಿಐ ಬಯಸಿದೆ.

ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ 17ನೇ ಸೀಸನ್ ಭಾರತದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದು, ಭಾರತದಲ್ಲಿ ಮಾತ್ರ ನಡೆಯಲಿದೆ ಎಂದಿದ್ದಾರೆ. ಐಪಿಎಲ್ 17ನೇ ಸೀಸನ್‌ನ ದಿನಾಂಕವನ್ನ ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಯ ದಿನಾಂಕಗಳಿಗಾಗಿ ನಾವು ಕಾಯುತ್ತಿದ್ದೇವೆ. ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ಐಪಿಎಲ್ 17ನೇ ಸೀಸನ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ ಎಂದರು.

ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವುದಿಲ್ಲ.!
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಐಪಿಎಲ್ 17 ನೇ ಸೀಸನ್‌ನ ಅಂತಿಮ ಪಂದ್ಯವನ್ನ ಮೇ 26 ರವರೆಗೆ ಆಡಬಹುದು. ಜೂನ್ 5 ರಿಂದ ಟಿ20 ವಿಶ್ವಕಪ್ ಆರಂಭವಾಗಲಿರುವುದರಿಂದ ಬಿಸಿಸಿಐ ತಯಾರಿಗಾಗಿ ಆಟಗಾರರಿಗೆ 8 ರಿಂದ 10 ದಿನಗಳ ಕಾಲಾವಕಾಶ ನೀಡಬಹುದು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.

ಈ ಹಿಂದೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್ 17ನೇ ಸೀಸನ್ ಭಾರತದ ಬದಲಾಗಿ ವಿದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐಪಿಎಲ್‌ನ ಎರಡನೇ ಋತುವನ್ನ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. 2014ರಲ್ಲಿಯೂ ಲೋಕಸಭೆ ಚುನಾವಣೆಯ ಕಾರಣ ಐಪಿಎಲ್‌ನ ಮೊದಲಾರ್ಧ ಯುಎಇಗೆ ಸ್ಥಳಾಂತರಗೊಂಡಿತ್ತು. ಆದರೆ ಈ ಬಾರಿ ಲೋಕಸಭೆ ಚುನಾವಣೆ ವೇಳೆ ಬಿಸಿಸಿಐ ಐಪಿಎಲ್ 17ನೇ ಸೀಸನ್ ಭಾರತದಲ್ಲಿ ಆಯೋಜಿಸಲಿದೆ.

 

BREAKING : ಮದ್ಯ ನೀತಿ ಹಗರಣ : ದೆಹಲಿ ಸಿಎಂ ‘ಕೇಜ್ರಿವಾಲ್’ಗೆ 6ನೇ ಬಾರಿಗೆ ‘ED ಸಮನ್ಸ್’

BREAKING : ಮದ್ಯ ನೀತಿ ಹಗರಣ : ದೆಹಲಿ ಸಿಎಂ ‘ಕೇಜ್ರಿವಾಲ್’ಗೆ 6ನೇ ಬಾರಿಗೆ ‘ED ಸಮನ್ಸ್’

ದುಬೈನಲ್ಲಿ ‘ಭಾರತ್ ಮಾರ್ಟ್’ ಉದ್ಘಾಟಿಸಿದ ಪ್ರಧಾನಿ ಮೋದಿ

Share.
Exit mobile version