ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 112 ರನ್ಗಳ ಭರ್ಜರಿ ಜಯ ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಬೆಂಗಳೂರು 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ತಂಡ 59 ರನ್ಗಳಿಗೆ ಆಲೌಟ್ ಆಯಿತು. ಇದು ಐಪಿಎಲ್ನ ಈ ಋತುವಿನಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ತಂಡವಾಗಿದೆ.
ಹೈದರಾಬಾದ್ ನಲ್ಲಿ ಮೇ, 18 ದಂದು ಗುರುವಾರ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ, ಮತ್ತು ಮೇ, 21 ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಸೆಣಸಾಡಲಿದೆ. ಈ ಎರಡು ಪಂದ್ಯಗಳು ಆರ್‌ಸಿಬಿಗೆ ಮುಖ್ಯವಾಗಿದೆ, ಗೆಲ್ಲುವ ಅನಿವಾರ್ಯತೆ ನಿರ್ಮಾಣ ಮಾಡಿದ್ದು, ಪ್ಲೇಆಫ್‌ಗೆ ಹೋಗಬೇಕಾದ್ರೆ ಇವರೆದನ್ನು ಗೆಲ್ಲಲೇ ಬೇಕಾಗಿದೆ.