ಬೆಂಗಳೂರು : ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ(Bengaluru) ಬೃಹತ್ ಐಪಿಎಲ್ ಹರಾಜು(mega auction) ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ(BCCI) ಶುಕ್ರವಾರ 1214 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಐಪಿಎಲ್ʼನಲ್ಲಿ ಭಾಗಿಯಾಗಿರುವ ಹತ್ತು ಫ್ರಾಂಚೈಸಿಗಳಿಗೆ(ten franchises) ಕಳುಹಿಸಲಾಗಿದೆ. ಇನ್ನು ಇತ್ತೀಚಿನ ಬೆಳವಣಿಗೆಯಲ್ಲಿ ಕೆಲವು ವರದಿಗಳು 2022ರ ಐಪಿಎಲ್ʼರಲ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನ ಕನ್ನಡಿಗ ದೇವದತ್ ಪಡಿಕ್ಕಲ್( Devdutt Padikkal) ಅವ್ರಿಗೆ ವಹಿಸಲಾಗುತ್ತೆ ಎಂದು ಹೇಳಲಾಗ್ತಿದೆ.
ಎಂಎಸ್ ಧೋನಿ (Chennai Super Kings), ರೋಹಿತ್ ಶರ್ಮಾ (Mumbai Indians) ಗೌತಮ್ ಗಂಭೀರ್ (Delhi Capitals) ಅವರಂತಹ ಇತರ ನಾಯಕರು ಅನೇಕ ಬಾರಿ ಐಪಿಎಲ್ ಟ್ರೋಫಿಯನ್ನ ಗೆದ್ದಿದ್ದರೆ. ಆದ್ರೆ, ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ಒಮ್ಮೆಯೂ ಐಪಿಎಲ್ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.
ಫ್ರಾಂಚೈಸಿಗೆ 2022ರ ಐಪಿಎಲ್ʼನಲ್ಲಿ ತಂಡವನ್ನ ಮುನ್ನಡೆಸಲು ಬಲವಾದ ಆಟಗಾರನ ಅಗತ್ಯವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೇವದತ್ ಪಡಿಕ್ಕಲ್ ಅವ್ರ ಮೇಲೆ ಒಲವು ಹೊಂದಿದ್ದು, ಅವ್ರು 2022ರ ಐಪಿಎಲ್ʼನಲ್ಲಿ ನಾಯಕ ಪಟ್ಟ ಕಟ್ಟಲು ಸಜ್ಜಾಗಿದೆ ಎಂದು ವರದಿಯಾಗಿದೆ.
BIGG NEWS: ಭಾರತದಲ್ಲಿ ಓಮಿಕ್ರಾನ್ ಸಮುದಾಯಕ್ಕೆ ಹರಡೋ ಹಂತದಲ್ಲಿದೆ – INSACOG ಮಾಹಿತಿ
BIGG BREAKING NEWS : ʼNDRF ಅಧಿಕೃತ ಟ್ವಿಟರ್ ಖಾತೆʼ ಹ್ಯಾಕ್.. ಕೆಲ ಸಂದೇಶಗಳು ಪೋಸ್ಟ್ ..!