ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ಹಲವಾರು ಬಳಕೆದಾರರಿಗೆ ಸರ್ವರ್‌ ಡೌನ್ ಎನ್ನಲಾಗಿದೆ. ಈ ಎರಡೂ ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ವೆಬ್ಸೈಟ್ ಸೇವೆಗಳ ಸ್ಟೇಟಸ್ ಟ್ರ್ಯಾಕರ್ ಡೌನ್ಡೆಟೆಕ್ಟರ್ ಪ್ರಕಾರ, ಇನ್ಸ್ಟಾಗ್ರಾಮ್ ಜುಲೈ 5 ರಂದು ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಿ ಬುಧವಾರ ಬೆಳಿಗ್ಗೆಯವರೆಗೆ ಭಾರಿ ತೊಂದರೆಯನ್ನು ತೋರಿಸುತ್ತಿದೆ ಎನ್ನಲಾಗಿದೆ.

ಈ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಸಂಪರ್ಕಗಳಿಗೆ ಡಿಎಂಗಳನ್ನು ಕಳುಹಿಸಲು ಪ್ರಯತ್ನಿಸುವಲ್ಲಿ ವಿಫಲರಾಗಿದ್ದು, ತಮ್ಮ ಹತಾಶೆಯನ್ನು ಹಂಚಿಕೊಳ್ಳಲು ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅಂದ ಹಾಗೇ ಇತ್ತೀಚಿನ ಅಸಮರ್ಪಕ ಕೆಲಸದ ಬಗ್ಗೆ ಮೆಟಾದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Share.
Exit mobile version