ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ( indira gandhi national open university – IGOUNO )ದಲ್ಲಿ ಖಾಲಿ ಇರುವಂತ ಪ್ರೋಫೆಸರ್, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ನಿರ್ದೇಶಕರು ಸೇರಿದಂತೆ ವಿವಿಧ ಬೋಧಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ಇಗ್ನೋ, ಖಾಲಿ ಇರುವಂತ 21 ಪ್ರೊಫೇಸರ್, 20 ಸಹ ಪ್ರಾಧ್ಯಾಪಕರು, 03 ಸಹಾಯಕ ಪ್ರಾಧ್ಯಾಪಕರು ಹಾಗೂ ವಿವಿಧ ವಿಭಾಗದ ಬೋಧನಾ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಸ್ನಾತಕೋತ್ತರ ಪದವಿ ಜೊತೆಗೆ ಯುಜಿಸಿ ಮಾನದಂಡ ಹೊಂದಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 7ನೇ ವೇತನ ಆಯೋಗದ ಅನ್ವಯ ಮಾಸಿಕ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ 05-01-2022 ಕೊನೆಯ ದಿನವಾಗಿದೆ. ಅಂಚೆ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 15-01-2022 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.
BEAUTY TIPS: ತೆಂಗಿನೆಣ್ಣೆಯಲ್ಲಿ ಈ ವಸ್ತುಗಳನ್ನು ಬೆರೆಸಿ, ನೈಸರ್ಗಿಕ ಶಾಂಪೂವನ್ನು ಮನೆಯಲ್ಲಿಯೇ ತಯಾರಿಸಿ
ಈ ಬಗ್ಗೆ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು http://ignou.ac.in/ignou/bulletinboard/advertisements/latest/jobs/detail/Advertisement_for_teaching_and_academic_posts-1932 ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ. ಇದಲ್ಲದೇ ಇಗ್ನೋ ಅಧಿಕೃತ ಜಾಲತಾಣ http://ignou.ac.in/ ನಲ್ಲಿಯೂ ಮಾಹಿತಿ ಪಡೆಯಬಹುದಾಗಿದೆ.
BIG BREAKING NEWS: ದಾವಣಗೆರೆಯ ಜಗಳೂರಿನಲ್ಲಿ ಶಾಲಾ ಬಸ್ ಕೆರೆ ಏರಿಗೆ ಡಿಕ್ಕಿ: 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ