ದೆಹಲಿ: ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

“ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನ 6E 1406 ದಲ್ಲಿ ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿದರು. ಈ ವೇಳೆ ಎಚ್ಚೆತ್ತುಕೊಂಡ ಅವರು ಕೂಡಲೇ ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿ, ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡ್‌ ಮಾಡಲಾಯಿತು. ಪ್ರಯಾಣಿಕರೆಲ್ಲರೂ ಸೇಫ್‌ ಆಗಿದ್ದು, ಅವರನ್ನು ಮತ್ತೊಂದು ವಿಮಾನದಲ್ಲಿ ಹೈದರಾಬಾದ್‌ಗೆ ಕಳುಹಿಸಲಾಗುತ್ತಿದೆ” ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ವಾರಗಳಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ, ಸ್ಪೈಸ್‌ಜೆಟ್ ವಿಮಾನವು ದೆಹಲಿಯಿಂದ ದುಬೈಗೆ ಹೋಗುವಾಗ ಪಾಕಿಸ್ತಾನದ ನಗರದಲ್ಲಿ ಅಸಮರ್ಪಕ ಸೂಚಕ ದೀಪದ ಕಾರಣ ನಿಗದಿತವಾಗಿ ನಿಲ್ಲಿಸಿತು. ನಂತ್ರ, 138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದ್ದರು.

Good News : ಸಾಲದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Big news:‌ ʻಪ್ಯಾರಾಸಿನ್ ಓಪನ್ ಚೆಸ್ ಪ್ರಶಸ್ತಿʼ ಗೆದ್ದ ಭಾರತದ ಗ್ರ್ಯಾಂಡ್ ಮಾಸ್ಟರ್ ʻಆರ್ ಪ್ರಗ್ನಾನಂದʼ

 

Share.
Exit mobile version