ನವದೆಹಲಿ:ಖ್ಯಾತ ಟೆನ್ನಿಸ್ ತಾರೆ ಸುಮಿತ್ ನಾಗಲ್ ಅತ್ಯುತ್ತಮ ಪ್ರದರ್ಶನದ ಕಾರಣ ಬ್ಯಾಂಕ್ ಆಫ್ ಬರೋಡಾ ಭಾರತೀಯ ಟೆನಿಸ್ ತಾರೆಯನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.

ನಾಗಲ್ ತಮ್ಮ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಎಟಿಪಿ ಸಿಂಗಲ್ಸ್ ಶ್ರೇಯಾಂಕದಲ್ಲಿ 71 ನೇ ಸ್ಥಾನವನ್ನು ತಲುಪಿದ್ದಾರೆ. ಇದರೊಂದಿಗೆ ಅವರು ಎಟಿಪಿ ಸಿಂಗಲ್ಸ್ ಶ್ರೇಯಾಂಕದ ಇತಿಹಾಸದಲ್ಲಿ ನಾಲ್ಕನೇ ಅತ್ಯುನ್ನತ ಶ್ರೇಯಾಂಕದ ಭಾರತೀಯ ಪುರುಷ ಟೆನಿಸ್ ತಾರೆಯಾಗಿದ್ದಾರೆ. ಈ ಒಪ್ಪಂದವು 26 ವರ್ಷದ ತಾರೆಗೆ ಭಾರಿ ಉತ್ತೇಜನ ನೀಡಬಹುದು. ಅವರು ಭಾರತದ ಪ್ರಮುಖ ಬ್ಯಾಂಕಿನ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ಮತ್ತು ಶೆಫಾಲಿ ವರ್ಮಾ ಅವರಂತಹ ಇತರ ಕ್ರೀಡಾ ವ್ಯಕ್ತಿಗಳೊಂದಿಗೆ ಸೇರಲಿದ್ದಾರೆ. .

ಬ್ಯಾಂಕ್ ಆಫ್ ಬರೋಡಾ ಬ್ರಾಂಡ್ ಎಂಡೋಸರ್ ಆಗಿ ಭಾರತದ ಟೆನಿಸ್ ತಾರೆ ಸುಮಿತ್ ನಾಗಲ್ ನೇಮಕವಾಗಿದ್ದಾರೆ.

Share.
Exit mobile version