ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (Indian Oil Corporation Limited) ಉತ್ತರ ಪ್ರಾದೇಶಿಕ ಕೇಂದ್ರದ ವಿವಿಧ ರಾಜ್ಯಗಳಲ್ಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಇಲೆಕ್ಟ್ರಾನಿಕ್ಸ್, ಇನ್‌ಸ್ಟ್ರುಮೆಂಟ್, ಮೆಕ್ಯಾನಿಕ್, ಡಾಟಾ ಎಂಟ್ರಿ ಆಪರೇಟರ್, ಸಿವಿಲ್, ಫಿಟ್ಟರ್, ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಿ ನಂತರ ಸಂದರ್ಶನ ನಡೆಸಿ ಮೆರಿಟ್ ಮೂಲಕ ಆಯ್ಕೆ ಮಾಡಲಿದೆ. ಟ್ರೇಡ್ ಅಪ್ರೆಂಟಿಸ್ ಗೆ ಸಂಬಂಧಿತ ವಿಷಯದಲ್ಲಿ ಐಟಿಐ ಪಾಸ್ ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಗೆ ಡಿಪ್ಲೋಮಾ ಉತ್ತೀರ್ಣರಾಗಿರಬೇಕು. https://www.ioclrecruit.com/ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 31-01-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.