ನವದೆಹಲಿ : ಭಾರತೀಯ ಮಹಿಳಾ ಹಾಕಿ ತಂಡದ ಅನುಭವಿ ಮಿಡ್‌ಫೀಲ್ಡರ್ ನಮಿತಾ ಟೊಪ್ಪೊ ಅವರು ಕೇವಲ 27ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 2012ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಟಗಾರ್ತಿ ಇಂದು ನಿವೃತ್ತಿ ಘೋಷಿಸುವ ಮೂಲಕ ತನ್ನ ದಶಕದ ವೃತ್ತಿಜೀವನವನ್ನ ಕೊನೆಗೊಳಿಸಿದರು.

ನಮಿತಾ, ಜಕಾರ್ತಾದಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತೀಯ ತಂಡ ಮತ್ತು 2014ರಲ್ಲಿ ಇಂಚಿಯಾನ್‌ನಲ್ಲಿ ಕಂಚಿನ ಪದಕ ವಿಜೇತ ತಂಡದ ಭಾಗವಾಗಿದ್ದರು.

ಗುರುವಾರ ಹಾಕಿ ಇಂಡಿಯಾ, ಭಾರತೀಯ ಮಹಿಳಾ ಹಾಕಿ ತಂಡದೊಂದಿಗೆ ಅತ್ಯುತ್ತಮ ವೃತ್ತಿಜೀವನಕ್ಕಾಗಿ ಅವ್ರನ್ನ ಅಭಿನಂದಿಸಿತು. ಈ ಸಮಯದಲ್ಲಿ ನಮಿತಾ ಜಪಾನ್‌ನ ಗಿಫುನಲ್ಲಿ ನಡೆದ 2017ರ ಏಷ್ಯಾ ಕಪ್‌ನಲ್ಲಿ ಚಿನ್ನದ ಪದಕ ಮತ್ತು ಕೌಲಾಲಂಪುರದಲ್ಲಿ 2014ರ ಋತುವಿನಲ್ಲಿ ಕಂಚಿನ ಪದಕವನ್ನು ಗೆದ್ದರು.

ರೂರ್ಕೆಲಾದ ಪಂಪೋಶ್ ಸ್ಪೋರ್ಟ್ಸ್ ಹಾಸ್ಟೆಲ್‌ನಿಂದ ತನ್ನ ಕ್ರೀಡಾ ಕೌಶಲ್ಯವನ್ನು ಕಲಿತ ನಮಿತಾ, 2007ರಲ್ಲಿ ಮೊದಲ ಬಾರಿಗೆ ತನ್ನ ರಾಜ್ಯ ತಂಡವನ್ನ ಪ್ರತಿನಿಧಿಸಿದರು ಮತ್ತು ದೇಶೀಯ ಸ್ಪರ್ಧೆಗಳಲ್ಲಿ ಅವರ ಸಾಧನೆಯು ಬಾಲಕಿಯರ ಅಂಡರ್-18 ಹಾಕಿ ಏಷ್ಯಾ ಕಪ್‌ಗೆ ಆಯ್ಕೆಯಾಗಲು ಸಹಾಯ ಮಾಡಿತು.

Share.
Exit mobile version