ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇಂದಿನಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳ ಅರ್ಜಿ ಸಲ್ಲಿಬಹುದು.
ಮುಖ್ಯ ದಿನಾಂಕಗಳು
ಅರ್ಜಿ ಆರಂಭವಾದ ದಿನಾಂಕ : ಜನವರಿ.25.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 9,2023
ಹುದ್ದೆಗಳ ಸಂಖ್ಯೆ
ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ ಖಾಲಿಯಿರುವ 71 ಸಹಾಯಕ ಕಮಾಂಡೆಂಟ್ ಹುದ್ದೆಗೆ ಭರ್ತಿ ಮಾಡುವ ಗುರಿಯನ್ನು ಈ ನೇಮಕಾತಿ ಅಭಿಯಾನ ಹೊಂದಿದೆ.
ಅರ್ಜಿ ಶುಲ್ಕ
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿಗಾಗಿ ಅರ್ಜಿ ಶುಲ್ಕವು SC/ST ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳಿಗೆ ರೂ 250 ಇದೆ.
ಆಯ್ಕೆ ಪ್ರಕ್ರಿಯೆ
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಶಾರ್ಟ್ ಲಿಸ್ಟ್ ಅನ್ನು ನಾಲ್ಕು-ಹಂತದ ಆಯ್ಕೆ ಕಾರ್ಯ ವಿಧಾನದ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮೊದಲು ಸ್ಕ್ರೀನಿಂಗ್ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ನಂತರ ಪ್ರಾಥಮಿಕ ಆಯ್ಕೆ ಮಂಡಳಿ, ಅಂತಿಮ ಆಯ್ಕೆ ಮಂಡಳಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ 2023 ರ ವಿವರವಾದ ಅರ್ಹತಾ ಮಾನದಂಡಗಳು ಮತ್ತು ಆಯ್ಕೆ ಪ್ರಕ್ರಿಯೆಯನ್ನು ತಿಳಿಯಬಹುದು.
GOOD NEWS : ‘ಸ್ಪರ್ಧಾತ್ಮಕ ಪರೀಕ್ಷೆ’ಗಳ ತರಬೇತಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
‘ಕಾಂಗ್ರೆಸ್ ನವರಿಗೆ ಕುಕ್ಕರ್ ಎಂದರೆ ಬಹಳ ಇಷ್ಟ’ : ಸಿಎಂ ಬೊಮ್ಮಾಯಿ ಲೇವಡಿ