ಅಬ್ಬಬ್ಬಾ ನಾಲ್ಕೇ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ಪಾಕ್ ಪ್ರಜೆಗಳಿಗೆ ಭಾರತದ ಪೌರತ್ವ..! – Kannada News Now


India

ಅಬ್ಬಬ್ಬಾ ನಾಲ್ಕೇ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ಪಾಕ್ ಪ್ರಜೆಗಳಿಗೆ ಭಾರತದ ಪೌರತ್ವ..!

ಹೊಸ ದಿಲ್ಲಿ: ಕೇಂದ್ರ ಸರಕಾರ ಇಂದು ರಾಜ್ಯಸಭೆಗೆ ಯಾವ ದೇಶದ ಎಷ್ಟು ಪ್ರಜೆಗಳಿಗೆ ಭಾರತದ ಪೌರತ್ವ ನೀಡಿದೆ ಎನ್ನವ ಮಾಹಿತಿ ನೀಡಿದೆ. ಇದರನ್ವಯ ನೋಡೋದಾದ್ರೆ, ಪಾಕಿಸ್ತಾನದ ಪ್ರಜೆಗಳೇ ಅತೀಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ.

ಹೌದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಕೇಂದ್ರದಿಂದ ಮಹತ್ವದ ನಿರ್ಧಾರ, ಇನ್ಮುಂದೆ ಎಲ್‌ಪಿಜಿಯಂತೆ ವಿದ್ಯುತ್‌ಗೂ ಸಬ್ಸಿಡಿ..!

ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಅವರು “ಭಾರತದ ಪೌರತ್ವ ಬಯಸಿ ಸಾವಿರಾರು ವಿದೇಶಿಯರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 2017ರಿಂದ ಈ ವರ್ಷದ ಸೆಪ್ಟೆಂಬರ್ 17ರ ವರೆಗೆ 44 ದೇಶಗಳ 2,729 ವಿದೇಶಿಗರಿಗೆ ದೇಶದ ಪೌರತ್ವ ದಯಪಾಲಿಸಲಾಗಿದೆ” ಎಂದು ತಿಳಿಸಿದರು.

ಇನ್ನು ಅಮೆರಿಕದ 60, ಶ್ರೀಲಂಕಾದ 58, ನೇಪಾಳದ 31, ಬ್ರಿಟನ್‌ನ‌ 20, ಮಲೇಷ್ಯಾದ 19, ಕೆನಡಾದ 14 ಮತ್ತು ಸಿಂಗಾಪುರದ 13 ಜನ ಕೂಡ ಭಾರತದ ಪೌರತ್ವ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ʼಸಿಹಿ ಸುದ್ಧಿʼ: ʼಸ್ಮಾರ್ಟ್ ಕಾರ್ಡ್‌ʼಗಳ ಅವಧಿ 10 ವರ್ಷ ಹೆಚ್ಚಳ..!
error: Content is protected !!