ಸುಭಾಷಿತ :

Monday, March 30 , 2020 12:09 AM

ಭಾರತ-ನ್ಯೂಜಿಲೆಂಡ್ ಟೆಸ್ಟ್ : ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 165 ರನ್ ಗೆ ಅಲೌಟ್!


Saturday, February 22nd, 2020 7:32 am

ವೆಲ್ಲಿಂಗ್ಟನ್ : ಭಾರತ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 68.1 ಓವರ್ ಗಳಲ್ಲಿ ಕೇವಲ 165 ರನ್ ಗಳಿಗೆ ಸರ್ವಪತನ ಕಂಡಿದೆ.

122ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನದಾಟ ಮುಂದುವರಿಸಿ ತಂಡಕ್ಕೆ 43 ರನ್ ಸೇರಿಸಿ ಆಲೌಟ್ ಆಗಿದೆ.ಕೊನೆಯ ಹಂತದಲ್ಲಿ 21 ರನ್ ಗಳ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಮಿ ತಂಡದ ಮೊತ್ತವನ್ನು 160 ರ ಗಡಿ ದಾಟಿಸಿದರು. ನ್ಯೂಜಿಲೆಂಡ್ ಪರ ಕೈಲ್ ಜೆಮಿಸನ್ ಹಾಗೂ ಟಿಮ್ ಸೌಥಿ ತಲಾ 4 ವಿಕೆಟ್ ಗಳನ್ನು ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕಿವಿಸ್ ಗೆಇಶಾಂತ್ ಶರ್ಮಾ ಮೊದಲ ಶಾಕ್ ನೀಡಿದ್ದು, ಕ್ಯಾಚಿತ್ತ ಟಾಮ್ ಲೇಥಮ್ (11) ವಿಕೆಟ್ ಪಡೆದರು. ಈ ಮೂಲಕ ನ್ಯೂಜಿಲೆಂಡ್ ಊಟದ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions