ಭಾರತ-ಇಂಗ್ಲೆಂಡ್ 4ನೇ ಪಂದ್ಯಕ್ಕೆ ‘ಪನ್ನು’ ಬೆದರಿಕೆ, ರಾಂಚಿಯಲ್ಲಿ ಭದ್ರತೆ ಹೆಚ್ಚಳ

ನವದೆಹಲಿ : ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಅಮೆರಿಕ ಮೂಲದ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಭದ್ರತೆಯನ್ನ ಬಿಗಿಗೊಳಿಸಲಾಗಿದೆ. ಗೃಹ ಸಚಿವಾಲಯದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಪನ್ನು, ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ವಿಡಿಯೋ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸುವಂತೆ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ಗೆ ಮನವಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 23 … Continue reading ಭಾರತ-ಇಂಗ್ಲೆಂಡ್ 4ನೇ ಪಂದ್ಯಕ್ಕೆ ‘ಪನ್ನು’ ಬೆದರಿಕೆ, ರಾಂಚಿಯಲ್ಲಿ ಭದ್ರತೆ ಹೆಚ್ಚಳ