ನವದೆಹಲಿ : ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಅಮೆರಿಕ ಮೂಲದ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಭದ್ರತೆಯನ್ನ ಬಿಗಿಗೊಳಿಸಲಾಗಿದೆ.

ಗೃಹ ಸಚಿವಾಲಯದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಪನ್ನು, ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ವಿಡಿಯೋ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸುವಂತೆ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ಗೆ ಮನವಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 23 ರಿಂದ ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌’ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ತಂಡ ಮಂಗಳವಾರ ಇಲ್ಲಿಗೆ ತಲುಪಿದೆ. ರಾಂಚಿಯಲ್ಲಿ ನಡೆಯಲಿರುವ ಪಂದ್ಯವನ್ನ ರದ್ದುಗೊಳಿಸುವಂತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ. ಪಂದ್ಯವನ್ನ ರದ್ದುಗೊಳಿಸುವ ಮೂಲಕ ಅಡ್ಡಿಪಡಿಸುವಂತೆ ಅವರು ಸಿಪಿಐ (ಮಾವೋವಾದಿ) ಯನ್ನ ಒತ್ತಾಯಿಸಿದ್ದಾನೆ.

 

BIGG NEWS : ‘NEET UG ಪರೀಕ್ಷೆ’ಗೆ 14 ಹೊಸ ‘ವಿದೇಶಿ ಕೇಂದ್ರ’ಗಳ ಸೇರ್ಪಡೆ

ಕೋಲಾರದಲ್ಲಿ ವಿದ್ಯುತ್ ಶಾಕ್ ನಿಂದ ಕಂಬದಲ್ಲೇ ಬೆಸ್ಕಾಂ ಗುತ್ತಿಗೆ ನೌಕರರ ಸಾವು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ‘ಜಾಕಿ ಭಗ್ನಾನಿ, ರಾಕುಲ್ ಪ್ರೀತ್ ಸಿಂಗ್’ : ಗೋವಾದಲ್ಲಿ ಅದ್ಧೂರಿ ವಿವಾಹ

Share.
Exit mobile version