ಕೇಂದ್ರದಿಂದ ಮಹತ್ವದ ನಿರ್ಧಾರ, ಇನ್ಮುಂದೆ ಎಲ್‌ಪಿಜಿಯಂತೆ ವಿದ್ಯುತ್‌ಗೂ ಸಬ್ಸಿಡಿ..! – Kannada News Now


India

ಕೇಂದ್ರದಿಂದ ಮಹತ್ವದ ನಿರ್ಧಾರ, ಇನ್ಮುಂದೆ ಎಲ್‌ಪಿಜಿಯಂತೆ ವಿದ್ಯುತ್‌ಗೂ ಸಬ್ಸಿಡಿ..!

ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮಾವಳಿ ಜಾರಿಗೆ ತರಲು ಮುಂದಾಗಿದ್ದು, ಇರನ್ವಯ ದೇಶದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ತನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸಲಿದೆ. ಅಂದ್ರೆ ವಿದ್ಯುತ್‌ ಪಡೆಯುವುದು ಈ ದೇಶದಲ್ಲಿರುವ ಪ್ರತಿಯೊಬ್ಬರ ಹಕ್ಕಾಗಲಿದೆ. ಇನ್ನು ಈಗಾಗಲೇ ಕೇಂದ್ರ ಇಂಧನ ಇಲಾಖೆಯು ಈ ಸಂಬಂಧ ಕರಡು ನಿಯಮಾವಳಿ ರೂಪಿಸಿದ್ದು, ಅದಕ್ಕೆ ಈ ವರ್ಷದ ಸೆ.30ರೊಳಗೆ ಜನರಿಂದ ಆಕ್ಷೇಪಣೆ ಆಹ್ವಾನಿಸಿದೆ. ಆಕ್ಷೇಪಣೆಗಳನ್ನ ಪರಿಶೀಲಿಸಿ, ಅಂತಿಮವಾಗಿ ʼವಿದ್ಯುತ್‌ ನಿಯಮಾವಳಿ-2020’ನ್ನ ಪ್ರಕಟಿಸಲಿದೆ.

ರಾಷ್ಟ್ರ ರಾಜಧಾನಿ ಫುಲ್‌ ಟೈಟ್‌: ಸೆ.30ರವರೆಗೆ ಸಮಾವೇಶಗಳೊಂದಿಗೆ ಸಭೆ-ಸಮಾರಂಭಗಳಿಗೆ ಬ್ರೇಕ್‌..!

ನಿಯಾಮವಳಿ ಜಾರಿಯಾದಲ್ಲಿ ಎಲ್‌ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರ ಸಬ್ಸಿಡಿ ಹಣ ಜಮೆ ಆಗಲಿದೆ. ಇನ್ನು ಜನರು ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯಲು ಸರಳ ವ್ಯವಸ್ಥೆ ಇರಬೇಕು. ಅದ್ರಂತೆ, ಮೆಟ್ರೋ ನಗರಗಳಲ್ಲಿ ಜನರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್‌ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್‌ ಸಂಪರ್ಕ ನೀಡಬೇಕು ಅಥವಾ ಈಗಾಗಲೇ ನೀಡಿರುವ ಸಂಪರ್ಕವನ್ನು ಬದಲಿಸಿಕೊಡಬೇಕು. ಇನ್ನು ಹೊಸ ಸಂಪರ್ಕ, ವರ್ಗಾವಣೆ, ರಿಪೇರಿ, ವಿದ್ಯುತ್‌ ಕಡಿತ ಇತ್ಯಾದಿ ಸಮಸ್ಯೆಗಳನ್ನು ಗ್ರಾಹಕರು ಬಗೆಹರಿಸಿಕೊಳ್ಳಲು ಆ್ಯಪ್‌ ಆಧಾರಿತ ವ್ಯವಸ್ಥೆ ತರಬೇಕು ಎನ್ನುವ ಹಲವು ನಿಯಮಗಳು ʼವಿದ್ಯುತ್‌ ನಿಯಮಾವಳಿ-2020’ ಇರಲಿವೆ.

ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಗುಡ್‌ ನ್ಯೂಸ್‌ʼ: ಗೋಧಿ ಸೇರಿ ಐದು ಹಿಂಗಾರು ಬೆಳೆಗಳ ʼಬೆಂಬಲ ಬೆಲೆʼ ಹೆಚ್ಚಳ..!
error: Content is protected !!