ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ( Coronavirus ) ಪ್ರಕರಣಗಳ ಸಂಖ್ಯೆ ಇಂದು ಶೇ.14.7ರಿಂದ ಶೇ.16.66ರಷ್ಟು ಏರಿಕೆ ಕಂಡಿದೆ. ಹೊಸದಾಗಿ ಇಂದು 2,68,833 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ.
ಅದ್ದೂರಿ ಪೆಂಡಾಲ್ ಹಾಕಿ ‘ಶ್ವಾನದ ಹುಟ್ಟುಹಬ್ಬ’ ಆಚರಿಸಿದ ಭೂಪ: ಬಂದವರಿಗೆ ಬಾಡೂಟ, ಭರ್ಜರಿ ಗಿಫ್ಟ್.!
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 2,68,833 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ವರದಿಯ ಪ್ರಕಾರಣ ನಿನ್ನೆಗಿಂತ 4,631 ಹೆಚ್ಚು ಕೇಸ್ ಗಳು ಪತ್ತೆಯಾಗಿವೆ. ಸೋಂಕಿತರಾದಂತ 1,22,684 ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
ಒಂದೇ ವಸತಿ ಶಾಲೆಯ 32 ವಿದ್ಯಾರ್ಥಿಗಳು, ಓರ್ವ ಶಿಕ್ಷಕನಿಗೆ ಕೊರೋನಾ ಶಾಕ್
ಇಂದು 2,68,833 ಕೋವಿಡ್ ಪಾಸಿಟಿವ್ ಬಂದ ಕಾರಣ, ಸಕ್ರೀಯ ಸೋಂಕಿತರ ಸಂಖ್ಯೆ 14,17,820ಕ್ಕೆ ಏರಿಕೆಯಾಗಿದೆ. ಈ ಮೂಲಕ ಕೋವಿಡ್ ಪಾಸಿಟಿವಿಟಿ ದರ ಶೇ.16.66ಕ್ಕೆ ಏರಿಕೆಯಾಗಿದೆ. ಕೊರೋನಾ ಜೊತೆ ಜೊತೆಗೆ ಓಮಿಕ್ರಾನ್ ಕೇಸ್ ಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು. ಇದುವರೆಗೆ 6,041 ಜನರಿಗೆ ಓಮಿಕ್ರಾನ್ ದೃಢಪಟ್ಟಿರೋದಾಗಿ ತಿಳಿಸಿದೆ.
India reports 2,68,833 fresh COVID cases (4,631 more than yesterday) and 1,22,684 recoveries in the last 24 hours
Active case: 14,17,820
Daily positivity rate: 16.66%Confirmed cases of Omicron: 6,041 pic.twitter.com/V8Qlx83eis
— ANI (@ANI) January 15, 2022