ನವದೆಹಲಿ: ದೇಶದಲ್ಲಿ ಇಂದು 2,109 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಗಿಂತ ಕೊಂಚ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 1,331 ಹೊಸ ಕೋವಿಡ್ ಕೇಸ್‌ಗಳು ಪತ್ತೆಯಾಗಿದ್ದವು.
ಇನ್ನೂ, ಸಕ್ರಿಯ ಪ್ರಕರಣಗಳ ಸಂಖ್ಯೆ 22,742 ರಿಂದ 21,406 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬುಧವಾರ ತಿಳಿಸಿವೆ.
ಕೋವಿಡ್-19 ಪ್ರಕರಣಗಳ ಸಂಖ್ಯೆ ಈಗ 4.49 ಕೋಟಿ (4,49,74,909)ಗೆ ತಲುಪಿದೆ.
ಇಂದು ಎಂಟು ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,722 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ರಾಷ್ಟ್ರೀಯಕೋವಿಡ್-19 ಚೇತರಿಕೆ ದರವು 98.77 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,44,21,781 ಕ್ಕೆ ಏರಿದೆ. ಆದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 220.66 ಕೋಟಿ ಡೋಸ್ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ.
ಚುನಾವಣಾ ಕರ್ತವ್ಯ ನಿರ್ವಹಿಸಲು ʻನಕಲಿ ಕೋವಿಡ್ ಪ್ರಮಾಣಪತ್ರʼ ನೀಡಿದ ಶಿಕ್ಷಕಿ… ಮುಂದೇನಾಯ್ತು ನೋಡಿ
ಚುನಾವಣಾ ಕರ್ತವ್ಯ ನಿರ್ವಹಿಸಲು ʻನಕಲಿ ಕೋವಿಡ್ ಪ್ರಮಾಣಪತ್ರʼ ನೀಡಿದ ಶಿಕ್ಷಕಿ… ಮುಂದೇನಾಯ್ತು ನೋಡಿ