BigNews: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ‘ಪಂದ್ಯಾವಳಿ’ ನಡೆಸುವ ಹಕ್ಕು ಕಳೆದುಕೊಂಡ ಭಾರತ – Kannada News Now


Other Sports Sports

BigNews: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ‘ಪಂದ್ಯಾವಳಿ’ ನಡೆಸುವ ಹಕ್ಕು ಕಳೆದುಕೊಂಡ ಭಾರತ

ನ್ಯೂಸ್‌ಡೆಸ್ಕ್‌ : 2021 ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ನಡೆಸುವ ಹಕ್ಕನ್ನು ಭಾರತ ಕಳೆದುಕೊಂಡಿದೆ ಎನ್ನಲಾಗಿದೆ.ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘವು ರಾಷ್ಟ್ರೀಯ ಒಕ್ಕೂಟದಿಂದ ಆತಿಥೇಯ ಶುಲ್ಕವನ್ನು ಪಾವತಿಸಲಿಲ್ಲ ಎಂದು ಆರೋಪಿಸಿದೆ.

ಇದೇ ವೇಳೇ ಘಟನೆಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಒಪ್ಪಿಕೊಂಡಿದ್ದು, ಹಣವನ್ನು ವರ್ಗಾಯಿಸಬೇಕಾದ ಖಾತೆಗೆ ಸಂಬಂಧಿಸಿದಂತೆ “ಸಮಸ್ಯೆಗಳನ್ನು” ಪರಿಹರಿಸಲು ಎಐಬಿಎ ವಿಫಲವಾದ ಕಾರಣಗಳಿಂದ ಹೀಗಾಗಿದೆ ಅಂತ ಹೇಳಿದೆ.  ಕಳೆದ ವರ್ಷ ಡಿಸೆಂಬರ್ 2 ರಂದು 4 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಭಾರತ ಪಂದ್ಯಾವಳಿ ನಡೆಸುವ ಸಲುವಾಗಿ ಪಾವತಿಸಬೇಕಾಗಿತ್ತು ಎನ್ನಲಾಗಿದೆ. ಹೋಸ್ಟ್ ಸಿಟಿ ಒಪ್ಪಂದದ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ನವದೆಹಲಿ ಆತಿಥೇಯ ಶುಲ್ಕವನ್ನು ಪಾವತಿಸುವ ಜವಾಬ್ದಾರಿಯನ್ನು ಪೂರೈಸದ ನಂತರ, ಎಐಬಿಎ ಒಪ್ಪಂದವನ್ನು ರದ್ದುಗೊಳಿಸಿದೆ. ಆದ್ದರಿಂದ, ಭಾರತವು 500 ಡಾಲರ್ ರದ್ದತಿ ದಂಡವನ್ನು ಪಾವತಿಸಬೇಕಾಗುತ್ತದೆ” ಎಂದು ಎಐಬಿಎ ಹೇಳಿಕೆಯಲ್ಲಿ ತಿಳಿಸಿದೆ