ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಪ್ರಮುಖ ಪಾಲುದಾರ: ಪ್ರಧಾನಿ ಮೋದಿ

ನವದೆಹಲಿ : ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಪ್ರಮುಖ ಪಾಲುದಾರನಾಗುತ್ತಿದೆ ಮತ್ತು ಈ ಬೆಳೆಯುತ್ತಿರುವ ಸಾಮರ್ಥ್ಯವು ನಮ್ಮ ಆರ್ಥಿಕ ಬೆಳವಣಿಗೆಯ ಅಡಿಪಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ತಮಿಳುನಾಡಿನಲ್ಲಿ ಟ್ಯುಟಿಕೋರಿನ್ ಅಂತರರಾಷ್ಟ್ರೀಯ ಕಂಟೇನರ್ ಟರ್ಮಿನಲ್’ನ್ನ ವರ್ಚುವಲ್ ಆಗಿ ಉದ್ಘಾಟಿಸಿದ ಪಿಎಂ ಮೋದಿ, ಹೊರ ಬಂದರು ಕಂಟೇನರ್ ಟರ್ಮಿನಲ್ ಅಭಿವೃದ್ಧಿಗೆ ದೇಶವು 7,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ ಮತ್ತು ವಿಒ ಚಿದಂಬರನಾರ್ ಬಂದರಿನ (ಹಿಂದೆ ಟ್ಯುಟಿಕೋರಿನ್ ಬಂದರು) ಸಾಮರ್ಥ್ಯವು ಬೆಳೆಯುತ್ತಲೇ ಇದೆ ಎಂದು ಹೇಳಿದರು. … Continue reading ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಪ್ರಮುಖ ಪಾಲುದಾರ: ಪ್ರಧಾನಿ ಮೋದಿ