ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ, ಐಸಿಸಿ ಏಕದಿನ Rankingನಲ್ಲಿ 2ನೇ ಸ್ಥಾನಕ್ಕೇರಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್ 3ನೇ ಸ್ಥಾನಕ್ಕೆ ಕುಸಿದಿದೆ.
ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈಲನ್ ಗೆ ಲಗ್ಗೆ ಇಟ್ಟಿರುವಂತ ಭಾರತ, ಅದರೊಟ್ಟಿಗೆ ಐಸಿಸಿ ಏಕದಿನ Ranking ಪಟ್ಟಿಯಲ್ಲೂ ಮೇಲಕ್ಕೇರಿದೆ. 2ನೇ ಸ್ಥಾನವನ್ನು ಮುಟ್ಟಿದೆ.
ಇನ್ನೂ ಏಷ್ಯಾಕಪ್ ಟೂರ್ನಿಯಲ್ಲಿ ಸೋಲು ಕಂಡಂತ ಪಾಕಿಸ್ತಾನ ತಂಡವು ನಂ.1 ಸ್ಥಾನವನ್ನು ಕಳೆದುಕೊಂಡಿದೆ.
ಈ ಬಗ್ಗೆ ಶುಕ್ರವಾರದಂದು ನೂತನ Ranking ಪಟ್ಟಿಯನ್ನು ಪ್ರಕಟಿಸಲಾಗಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ20 Rankingನಲ್ಲಿ ಅಗ್ರ ಸ್ಥಾನದಲ್ಲಿರುವಂತ ಭಾರತ ಸದ್ಯ ಏಕದಿನ ಟೂರ್ನಿಯ ಪಟ್ಟಿಯಲ್ಲಿ 116 ರೇಟಿಂಗ್ ಅಂಕ ಹೊಂದಿದೆ.
118 ಅಂಕ ಹೊಂದಿರುವಂತ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲ ಸ್ಥಾನದಲ್ಲಿದ್ದು, 115 ಅಂಕದೊಂದಿಗೆ ಪಾಕಿಸ್ತಾನ 3ನೇ ಸ್ಥಾನಕ್ಕೆ ತಲುಪಿದೆ.
ಸದ್ಯ ಭಾರತ ಮಾತ್ರ ಎಲ್ಲಾ 3 ಮಾದರಿಯಲ್ಲಿ ಅಗ್ರ 3ನೇ ಸ್ಥಾನದಲ್ಲಿದೆ. ಸೆ.22ರಿಂದ ಭಾರತ ತಂಡ ಆಸೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಲಿದ್ದು, ಗೆಲುವು ಸಾಧಿಸಿದ್ರೇ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ, ಮೊದಲ ಸ್ಥಾನಕ್ಕೆ ತಲುಪಲಿದೆ.
BIG NEWS: ಪರಿಸರಕ್ಕೆ ಮಾರಕ ‘POP ಗಣೇಶನ ಮೂರ್ತಿ’ ತಯಾರಿಕೆ, ಮಾರಾಟ, ವಿಸರ್ಜನೆ ನಿಷೇಧ – ಸಚಿವ ಈಶ್ವರ್ ಖಂಡ್ರೆ
ಪತ್ನಿಯಿಂದ ಕ್ರೌರ್ಯ ಸಾಬೀತಾದ್ರೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸ್ಬೋದು : ಹೈಕೋರ್ಟ್