ಸುಭಾಷಿತ :

Tuesday, January 28 , 2020 2:09 PM

ಬಿಗ್‌ ನ್ಯೂಸ್ : ‘2023’ ರ ಪುರುಷರ ವಿಶ್ವಕಪ್‌ ಪಂದ್ಯಾವಳಿ ಆಯೋಜನೆ ‘ಭಾರತದ ಮಡಿಲಿಗೆ’


Friday, November 8th, 2019 5:56 pm


ನವದೆಹಲಿ: ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಭಾರತವನ್ನು 2023 ರ ಎಫ್‌ಐಹೆಚ್ ಹಾಕಿ ಪುರುಷರ ವಿಶ್ವಕಪ್‌ಗೆ ಆತಿಥೇಯರನ್ನಾಗಿ ಘೋಷಣೆ ಮಾಡಿದೆ. ಈ ನಡುವೆ ಸ್ಪೇನ್ ಮತ್ತು ನೆದರ್‌ಲ್ಯಾಂಡ್ಸ್ 2022 ರ ಎಫ್‌ಐಹೆಚ್ ಹಾಕಿ ಮಹಿಳಾ ವಿಶ್ವಕಪ್‌ ಅನ್ನು ನಡೆಸಿಕೊಡಲಿದೆ.

ಭಾರತ ಈಗ ಸತತ ಎರಡು ಪುರುಷರ ವಿಶ್ವಕಪ್‌ಗಳನ್ನು ಆಯೋಜಿಸಿದ ಮೊದಲ ರಾಷ್ಟ್ರವಾಗಿದೆ. 2023 ಹಾಕಿ ಪುರುಷರ ವಿಶ್ವಕಪ್ ಜನವರಿ 13 ರಿಂದ ಜನವರಿ 29 ರವರೆಗೆ ನಡೆಯಲಿದೆ. ಭಾರತದ ಬಿಡ್ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಮಾಡಿತ್ತು ಎನ್ನಲಾಗಿದೆ. ಪುರುಷರ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಆಸ್ಟ್ರೇಲಿಯಾ, ಜರ್ಮನಿ ಮತ್ತು ಸ್ಪೇನ್ ಆರಂಭಿಕ ಆಸಕ್ತಿಯನ್ನು ತೋರಿಸಿತ್ತು, ಆದರೆ ಭಾರತ ಮಾಡಿದ್ದ ಬಿಡ್‌ಗಿಂತ ಕಡಿಮೆ ಮಟ್ಟದಲ್ಲಿ ಬಿಡ್‌ ಮಾಡಿದ್ದರಿಂದ ಆ ದೇಶಗಳು ವಿಶ್ವಕಪ್‌ ಆತಿಥ್ಯ ವಹಿಸಲು ವಿಫಲವಾದವು. ಹಾಕಿ ಇನ್ಸೈಡರ್ ಪ್ರಕಾರ, ಪುರುಷರ ವಿಶ್ವಕಪ್‌ಗಾಗಿ 3.5 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳನ್ನು ಭಾರತ ಬಿಡ್‌ ಸಲ್ಲಿಸಿದೆ ಎನ್ನಲಾಗಿದೆ.  ಮುಂದಿನ ಪುರುಷರ ವಿಶ್ವಕಪ್ ಅನ್ನು ನಡೆಸುವ ಹಕ್ಕನ್ನು ಬೆಲ್ಜಿಯಂ ಮತ್ತು ಮಲೇಷ್ಯಾ ಕೂಡ ಹೊಂದಿದೆ ಎನ್ನಲಾಗಿದೆ.

2010 ರಲ್ಲಿ ನವದೆಹಲಿಯಲ್ಲಿ ಪುರುಷರ ವಿಶ್ವಕಪ್ ಆತಿಥ್ಯ ವಹಿಸಿದ್ದರಿಂದ ಎಫ್‌ಐಎಚ್ ಕೂಡ ಒಂದು ದೊಡ್ಡ ಮೊತ್ತವನ್ನು ಗಳಿಸಿತ್ತು, ನಂತರ 2018 ರಲ್ಲಿ ಭಾರತ ಮತ್ತೆ ಪುರುಷರ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದರಿಂದ ಜನಪ್ರಿಯತೆ ಮತ್ತು ಲಾಭಗಳು ಹೆಚ್ಚಾದವು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions