ಬೆಂಗಳೂರು: ರಾಜ್ಯ ಸರ್ಕಾರದಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಬೆಂಗಳೂರಿಗರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆಗಸ್ಟ್ 15ರಂದು ಇಡೀ ದಿನ ನಗರದಾಧ್ಯಂತ ಉಚಿತವಾಗಿ ಬಿಎಂಟಿಸಿ ಬಸ್ ನಲ್ಲಿ ( BMTC Bus ) ಸಂಚರಿಸೋದಕ್ಕೆ ಅವಕಾಶ ನೀಡಿದೆ. ಈ ಮೂಲಕ ಬೆಂಗಳೂರಿಗರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಭರ್ಜರಿ ಗಿಫ್ಟ್ ನೀಡಿದೆ.

BREAKING NEWS : ಜಾನುವಾರು ಕಳ್ಳಸಾಗಣೆ ಪ್ರಕರಣ : ‘ ಟಿಎಂಸಿ ಬಿರ್ಭುಮ್ ‘ ಜಿಲ್ಲಾ ಮುಖ್ಯಸ್ಥರನ್ನು ‘ ಬಂಧಿಸಿದ ಸಿಬಿಐ ‘

ಈ ಕುರಿತಂತೆ ಬಿಎಂಟಿಸಿಯಿಂದ ಮಾಹಿತಿ ನೀಡಲಾಗಿದ್ದು, ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಲುವಾಗಿ ನಗರದಾದ್ಯಂತ ವೋಲ್ವೋ ಸಹಿತ ಎಲ್ಲಾ ಮಾದರಿಯ ಬಸ್ ಗಳಲ್ಲಿ ಇಡೀ ದಿನ ಉಚಿತವಾಗಿ ಸಂಚರಿಸೋದಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಕರು ಬಿಎಂಟಿಸಿಯ ಎಲ್ಲಾ ಮಾದರಿಯ ಬಸ್ ಗಳಲ್ಲಿ ಅಂದು ಉಚಿತವಾಗಿ ಪ್ರಯಾಣಿಸಬಹುದಾಗಿ ಎಂದು ತಿಳಿಸಿದೆ.

BIGG NEWS : ಸಾರ್ವಜನಿಕರ ಗಮನಕ್ಕೆ : `ಶಾಂತಿಸಾಗರ’ ಸುತ್ತಮುತ್ತಾ ಜನರ ಓಡಾಟಕ್ಕೆ ನಿಷೇಧ

ಅಂದಹಾಗೇ ಆಗಸ್ಟ್ 15ರಂದು ಒಂದು ದಿನ ಉಚಿತವಾಗಿ ಬಿಎಂಟಿಸಿಯ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 3 ಕೋಟಿ ನಷ್ಟ ಕೂಡ ಉಂಟಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

BIG BREAKING NEWS: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಶ್ ಧಂಕರ್ ಪ್ರಮಾಣವಚನ ಸ್ವೀಕಾರ | Jagdeep Dhankhar takes oath

ಒಟ್ಟಾರೆಯಾಗಿ ಆಗಸ್ಟ್ 15ರಂದು ವೋಲ್ಪೋ ಸಹಿತ ಎಲ್ಲಾ ಬಿಎಂಟಿಸಿ ಬಸ್ ಗಳಲ್ಲಿ ಇಡೀ ದಿನ ಬೆಂಗಳೂರಿನಿಂದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

Share.
Exit mobile version