ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ನಲ್ಲಿ ಅಕ್ಷರಶಃ ಅಬ್ಬರಿಸಿದ್ದು, ಅದ್ಭುತ ಪ್ರದರ್ಶನದಿಂದ ಶತಕ ಪೂರೈಸಿದ್ದಾರೆ. ಈ ಮೂಲಕ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಗಳಿಸಿದ್ದಾರೆ.
ಟೆಸ್ಟ್ನ ಮೊದಲ ದಿನ ರಿಷಭ್ ಪಂತ್ 146 ರನ್ ಬಾರಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ರು. ಸಧ್ಯ ಜಡೇಜಾ ಅದ್ಭುತ ಶತಕವನ್ನ ಬಾರಿಸುತ್ತಿದ್ದಂತೆ ಎಲ್ಲರನ್ನೂ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ್ರು. ಜಡೇಜಾ ಪರಿಣಾಮಕಾರಿ ಹೊಡೆತದೊಂದಿಗೆ ತಮ್ಮ ಮೊದಲ ವಿದೇಶಿ ಶತಕವನ್ನ ತಲುಪಿದರು, ಅದು ಚೆಂಡನ್ನ ಬೌಂಡರಿ ಹಗ್ಗಗಳಿಗೆ ಕೊಂಡೊಯ್ದಿತು.
ಟೆಸ್ಟ್ನ 2ನೇ ದಿನದಂದು ಮ್ಯಾಥ್ಯೂ ಪಾಟ್ಸ್ ಅವರ ವೈಡ್ ಬಾಲ್ʼನ್ನ ಜಡೇಜಾ ತಮ್ಮ ಶತಕವನ್ನ ಗಳಿಸಲು ಉಪಯೋಗಿಸಿಕೊಂಡ್ರು. ವೃತ್ತಿ ಜೀವನದ ಮೂರನೇ ಟೆಸ್ಟ್ ಶತಕವನ್ನ ತಮ್ಮ ಪ್ರಸಿದ್ಧ ‘ಖಡ್ಗ ಆಚರಣೆ’ ಮೂಲಕ ಸಂಭ್ರವಿಸಿದರು. ಜಡೇಜಾ ವಿಶಿಷ್ಟ ಸಂಭ್ರಮಾಚರಣೆಗೆ ಪ್ರೇಕ್ಷಕರು ಮತ್ತು ಅವರ ತಂಡದ ಸಹ ಆಟಗಾರರ ಚಪ್ಪಾಳೆ ತಟ್ಟುವ ಖುಷಿ ವ್ಯಕ್ತಪಡಿಸಿದರು.
#ENGvIND #ViratKohli𓃵 pic.twitter.com/yajSzm534T
— Jemi_forlife (@jemi_forlife) July 2, 2022
CENTURY for @imjadeja 👏👏
This is his third 💯 in Test cricket 👌👌
LIVE – https://t.co/LL20D1K7si #ENGvIND pic.twitter.com/10LrrWiuVB
— BCCI (@BCCI) July 2, 2022