ಹಿಂಡೆನ್‌ಬರ್ಗ್‌ನ ವಂಚನೆ ಆರೋಪಗಳಲ್ಲಿ ‘ಅದಾನಿ ಗ್ರೂಪ್‌’ಗೆ ಸೆಬಿ ಕ್ಲೀನ್ ಚಿಟ್

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಗುರುವಾರ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಅದಾನಿ ಗುಂಪಿಗೆ ಕ್ಲೀನ್ ಚಿಟ್ ನೀಡಿದ್ದು, ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್, ಗೌತಮ್ ಅದಾನಿ ಮತ್ತು ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಸೇರಿದಂತೆ ಅವರ ಗುಂಪು ಕಂಪನಿಗಳ ವಿರುದ್ಧ ಮಾಡಿದ್ದ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳನ್ನು ತಳ್ಳಿಹಾಕಿದೆ.